ಕೆಎಸ್‌ಆರ್‌ಟಿಸಿ ನಿವೃತ್ತ ಅಂಕಿ ಅಂಶ ಸಹಾಯಕ ಹರೀಶ್ಚಂದ್ರರವರಿಗೆ ಬೀಳ್ಕೊಡುಗೆ

0

ಪುತ್ತೂರು: ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ಕಚೇರಿಯಲ್ಲಿ ಅಂಕಿ ಅಂಶ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಹರೀಶ್ಚಂದ್ರ ಪಿ.ಎಸ್ ಮೂವಪ್ಪುರವರಿಗೆ ಬೀಳ್ಕೊಡುಗೆ ಸಮಾರಂಭವು ವಿಭಾಗೀಯ ಕಚೇರಿಯಲ್ಲಿ ನಡೆಯಿತು.

ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿಯವರು ನಿವೃತ್ತರಾದ ಹರೀಶ್ಚಂದ್ರ ಪಿ.ಎಸ್ ದಂಪತಿಯನ್ನು ಸನ್ಮಾನಿಸಿ, ಗೌರವಿಸಿದರು. ಈ ಹಿಂದೆ ಪುತ್ತೂರು ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾಗಿದ್ದು ನಿವೃತ್ತಿಗೊಂಡಿರುವ ರಾಜಶೇಖರ್ ಮೂರ್ತಿ ಹಾಗೂ ನಾಗರಾಜ್ ಶಿರಾಲಿ, ಪುತ್ತೂರು ವಿಭಾಗದ ವಿವಿಧ ವಿಭಾಗಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು, ನಿವೃತ್ತ ಹರೀಶ್ಚಂದ್ರರವರ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುದೀರ್ಘ 35 ವರ್ಷಗಳ ಕಾಲ ನಿಗಮದಲ್ಲಿ ಕರ್ತವ್ಯ ನಿರ್ವಹಿಸಿರುವ ಹರಿಶ್ಚಂದ್ರರವರು, ಕಿರಿಯ ಅಂಕಿ ಅಂಶ ಸಹಾಯಕರಾಗಿ ನಿಗಮಕ್ಕೆ ನೇಮಕಗೊಂಡು ನಂತರ ಅಂಕಿ ಅಂಶ ಸಹಾಯಕರಾಗಿ ಮುಂಭಡ್ತಿ ಪಡೆದುಕೊಂಡಿದ್ದರು. ನಿಗಮದ ಮಂಗಳೂರು ಹಾಗೂ ಪುತ್ತೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಪತ್ನಿ ಗೃಹಿಣಿ ಧರ್ಮಲತಾ, ಪುತ್ರರಾದ ಶಟಲ್ ಬ್ಯಾಡ್ಮಿಂಟನ್ ರಾಷ್ಟ್ರೀಯ ಆಟಗಾರ ವರುಣ್ ಹಾಗೂ ರಾಷ್ಟ್ರೀಯ ಚೆಸ್ ಆಟಗಾರ ವತನ್‌ರವರೊಂದಿಗೆ ಪಡ್ಡಾಯೂರಿನ ಮೂವಪ್ಪುನಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here