ಮೊಟ್ಟೆತ್ತಡ್ಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ

0

ಪುತ್ತೂರು: ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿಯಾಗಿ ಡಿ. ಕೆ ಶಿವಕುಮಾರ್ ಹಾಗೂ ಉಳಿದವರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ ಮೊಟ್ಟೆತ್ತಡ್ಕ ಜಂಕ್ಷನ್ ನಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಚ್.ಮಹಮದ್ ಆಲಿ ಹಾಗೂ ಸ್ಥಳೀಯ ನಗರಸಭೆ ಸದಸ್ಯೆ ಶೈಲಾ ಪೈ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು.


ಸಂಭ್ರಮಾಚರಣೆ ಬಳಿಕ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮದ್ ಆಲಿರವರು, ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ನೆಟ್ಟಣಿಗೆ ಮುಡ್ನೂರು ಬಿಟ್ಟರೆ ಕೆಮ್ಮಿಂಜೆ ಗ್ರಾಮವೇ ಕಾಂಗ್ರೆಸ್ ಗೆ ಅತ್ಯಂತ ಹೆಚ್ಚು ಲೀಡ್ ತಂದ ಗ್ರಾಮವಾಗಿರುತ್ತದೆ. ಕಳೆದ ಹಲವಾರು ವರ್ಷಗಳಿಂದ ಕೆಮ್ಮಿಂಜೆ ಗ್ರಾಮವು ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿದಿದೆ. ಕಳೆದ 30 ವರ್ಷಗಳಿಂದ ಕೆಮ್ಮಿಂಜೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ನನ್ನ ಸಾರ್ವಜನಿಕ ಜೀವನವನ್ನು ಮೀಸಲಿಟ್ಟಿದ್ದೇನೆ. ಈ ಕಾರಣಕ್ಕಾಗಿ ಇಂದಿಗೂ ಕೆಮ್ಮಿಂಜೆ ಗ್ರಾಮ ಕಾಂಗ್ರೆಸ್ ಗ್ರಾಮವಾಗಿ ಉಳಿದಿದೆ, ನನ್ನನ್ನು ಸಂಪ್ಯ ಮಂಡಲ ಪಂಚಾಯತ್ ಪ್ರದಾನ ನಾಗಲು 5 ಬಾರಿ ಪುರಸಭೆ ಹಾಗೂ ನಗರಸಭಾ ಸದಸ್ಯರಾಗಲು, ಪುರಸಭಾ ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕನಾಗಿ ಕರ್ತವ್ಯ ನಿರ್ವಹಿಸಲು, ಇದೀಗ ಅರ್ಯಾಪು ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ನಾಗಿ ಜನತೆಯ ಕೆಲಸ ಮಾಡಲು ನನಗೆ ಶಕ್ತಿ ನೀಡಿದವರೆ ಕೆಮ್ಮಿ0ಜೆ ಗ್ರಾಮದ ಜನರು ಎಂಬುದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ ಸಹಿತ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here