ಪುತ್ತೂರು: ಪುತ್ತೂರಿನಲ್ಲಿ ನಡೆದ ಘಟನೆ ಅಮಾನುಷವಾದದ್ದು . ಇದು ನಡೆಯಬಾರದಿತ್ತು. ನಾನು ಇದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುವನ್ನು ಮೇ 20ರಂದು ಬೇಟಿ ಮಾಡಿದ ಅವರು ಬಳಿಕ ಮಾದ್ಯಮದೊಂದಿಗೆ ಮಾತನಾಡಿದ ಮುತಾಲಿಕ್. ಕಾರ್ಯಕರ್ತರು ಹಿಂದುತ್ವಕ್ಕಾಗಿ ಯಾವುದಕ್ಕೂ ಸಿದ್ದವಾಗಿರುವ ಸಿದ್ಧಾಂತಕ್ಕೆ ಬದ್ಧರಾಗಿರುವವರು. ಅಂತವರ ಮೇಲೆ ಬ್ರಿಟೀಷ್ ಮಾದರಿ ಕ್ರೌರ್ಯ ಮೆರೆದಿರುವುದು ಅತ್ಯಂತ ಖಂಡನೀಯವಾದದ್ದು. ಇದೊಂದು ಅಕ್ಷಮ್ಯ ಅಪರಾಧ. ಈ ಕಾರ್ಯಕರ್ತರು ಮಾಡಿದ ತಪ್ಪೇನು ಎಂದು ಪ್ರಶ್ನಿಸಿದ ಅವರು ಸಾರ್ವಜನಿಕ ಜೀವನದಲ್ಲಿ ಪ್ರವೇಶ ಮಾಡಿದಾಗ ಹೂವಿನ ಹಾರ ಹಾಕಿಕೊಳ್ಳಲು ಸಿದ್ದರಿರಬೇಕು. ಚಪ್ಪಲಿ ಹಾರ ಹಾಕಿಕೊಳ್ಳಲೂ ಸಿದ್ದರಿರಬೇಕು ಎಂದರು.
ಮಾನ ಅಪಮಾನ, ಸಮ್ಮಾನ ಎಲ್ಲವನ್ನು ಸಮಾನವಾಗಿ ನೋಡಬೇಕು. ಯಾಕೆ ಹಾಕಿದ್ದಾರೆ ಎಂಬುದನ್ನು ಅವಲೋಕನ ಮಾಡಬೇಕು. ಅದು ಬಿಟ್ಟು ಕಾರ್ಯಕರ್ತರ ಮೇಲೆ ಮಾಡಿದ ಕ್ರೌರ್ಯಕ್ಕೆ ಕ್ಷಮೆ ಇಲ್ಲ ಎಂದ ಅವರು ಸಮಾಜ ನಿಮ್ಮ ಮೇಲೆ ಚಪ್ಪಲಿ ಹಾರ ಹಾಕಿರುವುದಕ್ಕಿಂತ ಹೆಚ್ಚಾಗಿ ಉಗಿತಾ ಇದ್ದರು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಹೇಳಿದರು.
ಲಕ್ಷಾಂತರ ಮಂದಿ ಹಿಂದುಗಳ ಶಾಪ ತಟ್ಟಲಿದೆ:
ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದ ಕಾರ್ಯಕರ್ತರು ರೇಪಿಸ್ಟರಾ, ಭಯೋತ್ಪಾದಕರ, ನಕಲಿ ನೋಟು ಪ್ರಿಂಟ್ ಮಾಡುವವರ. ಕೊಲೆಗಡುಕರಾ, ದರೋಡೆಕೋರರ ಎಂದು ಪ್ರಶ್ನಿಸಿದ ಮುತಾಲಿಕ್ ಅವರು ಒಂದು ಬ್ಯಾನರ್ ಹಾಕಿದಕ್ಕೆ ಈ ರೀತಿಯ ಕ್ರೌರ್ಯ ಮೆರೆಯುತ್ತಾರೆ ಎಂದಾದರೆ ಈ ಕ್ರೌರ್ಯಕ್ಕೆ ಲಕ್ಷಾಂತರ ಹಿಂದುಗಳ ಶಾಪ ತಟ್ಟುತ್ತದೆ. ಇಲಾಖೆಯಲ್ಲಿರವವರು ಕೂಡಾ ಕಾನೂನು ಮೀರಿ ವರ್ತನೆ ಮಾಡುವುದು ಅತ್ಯಂತ ತಪ್ಪು ಎಂದರು.
ಡಿವೈಎಸ್ಪಿ ಅಮಾನತು ಆಗಬೇಕು:
ಸಂತ್ರಸ್ತರು ಹೇಳುವ ಪ್ರಕಾರ ಘಟನೆಗೆ ಮೂಲ ವ್ಯಕ್ತಿ ಡಿವೈಎಸ್ಪಿ. ಅವರ ಅಮಾನತು ಆಗಬೇಕು. ಈ ಕುರಿತು ಶ್ರೀರಾಮ ಸೇನೆಯಿಂದ ಘಟನೆ ಮೂಲ ವ್ಯಕ್ತಿ ಅಮಾನತು ಆಗುವ ತನಕ ಹೋರಾಟ ಮಾಡಲಿದ್ದೇವೆ. ರಾಜ್ಯಾದ್ಯಾಂತ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುತ್ತೇವೆ ಎಂದು ಮುತಾಲಿಕ್ ಹೇಳಿದರು.
ಕೂತು ಬಗೆ ಹರಿಸುವ ಮಾನಸಿಕ ಡೆವೆಲಪ್ ಮಾಡಬೇಕು:
ತಪ್ಪು ಒಪ್ಪುಗಳು ಒಟ್ಟಿಗೆ ಕೂತು ಬಗೆ ಹರಿಸುವ ಮಾನಸಿಕತೆಯನ್ನು ಡೆವೆಲಪ್ ಮಾಡಬೇಕು. ದುಷ್ಟ ಶಕ್ತಿಗಳು ನಗುತ್ತಿವೆ. ಹಿಂದು ಹಿಂದುಗಳಲ್ಲಿ ಕಚ್ಚಾಟದಿಂದ ಮೂರನೆಯವರಿಗೆ ಲಾಭ ಆಗುತ್ತಿದೆ ಎಂಬುದಕ್ಕೆ ಈ ಘಟನೆ ಉದಾಹರಣೆ. ಅಟ್ಟಹಾಸ ಬೆರೆಯುವವರಿಗೆ ಇದು ಖುಷಿ ಕೊಡುತ್ತಿದೆ. ಪುತ್ತೂರು ಕ್ಷೇತ್ರ ಸೂಕ್ಷ್ಮ ಕ್ಷೇತ್ರ. ಇಲ್ಲಿ ದುಷ್ಟ ಶಕ್ತಿಗಳಿವೆ. ಇಂತಹ ಸಂದರ್ಭದಲ್ಲಿ ದ್ವೇಷ, ಅಸುಯೆ, ಸೇಡು ತೀರಿಸಿಕೊಳ್ಳುವುದು ನಿಮಗೆ ಶೋಭೆ ತರುವುದು ಅಲ್ಲ ಎಂದು ಹೇಳುತ್ತೇನೆ. ಇಲ್ಲಿ ಇಲಾಖೆಯ ಒಂದು ಪಾತ್ರ ಆಷ್ಟೆ. ಆದರೆ ಅದರ ಹಿಂದೆ ಇರುವ ಕೈಗಳಿಗೆ ಶೋಭೆ ತರುವುದಿಲ್ಲ ಎಂದು ಮುತಾಲಿಕ್ ಹೇಳಿದರು.
ಅವರ ಹೇಳಿಕೆಯನ್ನು ನಾನು ಒಪ್ಪಲ್ಲ:
ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಕಾಂಗ್ರೆಸ್ ಮೇಲೆ ಆರೊಪ ಹೊರಿಸಿದ್ದರು ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ ಮುತಾಲಿಕ್ ಅವರು ‘ಅವರ ಹೇಳಿಕೆಯನ್ನು ನಾನು ಒಪ್ಪಲ್ಲ’ ಯಾಕೆಂದರೆ ಸೋತ ಅಭ್ಯರ್ಥಿ, ಮಾಜಿ ಶಾಸಕರು ಪ್ರತಿಭಟನೆ ಮಾಡಿದ್ದಾರೆ. ನೇರವಾಗಿ ಪ್ರತಿಭಟನೆಯಲ್ಲಿ ಹಿಂದು ಕಾರ್ಯಕರ್ತರಿಗೆ ಧಿಕ್ಕಾರ ಮತ್ತು ಅವರನ್ನು ಬಂಧಿಸಿ ಎಂದು ಹೇಳಿದ್ದಾರೆ. ಹಾಗಾಗಿ ಇದು ಕಾಂಗ್ರೆಸ್‌ನವರು ಮಾಡಿದಲ್ಲ. ಇದನ್ನು ಮುಚ್ಚು ಹಾಕುವ ತಂತ್ರಗಾರಿಕೆ ಬೇಡ. ತಪ್ಪನ್ನು ತಿದ್ದು ಕೊಂಡು ಮುಂದೆ ಸರಿ ಮಾಡಬೇಕು ವಿನಃ ಇನ್ನೊಬ್ಬರ ಮೇಲೆ ಕೆಸರು ಎರಚುವ ಕೆಲಸ ದಯವಿಟ್ಟು ಮಾಡಬೇಡಿ. ಇಲ್ಲಿ ತಪ್ಪಾಗಿದೆ. ಇದನ್ನು ಸರಿ ಪಡಿಸುವುದು ಹೇಗೆ ಎಂದು ಯೋಚನೆ ಮಾಡಬೇಕು ವಿನಃ ಇನ್ನೊಬ್ಬರ ಮೇಲೆ ತಪ್ಪು ಹೊರಿಸುವ ಕೆಲಸ ಮಾಡಬಾರದು. ಎಲ್ಲರಿಗೂ ಗೊತ್ತಿಗೆ. ಇನ್ನು ಏನೋ ಹೇಳಲು ಹೋಗಿ ಅಪಹಾಸ್ಯಕ್ಕೆ ಈಡಾಗುತ್ತೀರಿ ಎಂದು ಹೇಳಿದರು.