ಉಪ್ಪಿನಂಗಡಿ : ಕಾರುಗಳು ಡಿಕ್ಕಿ-ಆರು ಮಂದಿಗೆ ತೀವ್ರ ಗಾಯ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಣಿಯೂರು ಗ್ರಾಮ ಪಿಲಿಗೂಡು ಎಂಬಲ್ಲಿ ಕಾರುಗಳೆರಡು ಪರಸ್ಪರ ಡಿಕ್ಕಿ ಹೊಡೆದು ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.

ಬೆಳ್ತಂಗಡಿಯಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಸ್ವಿಫ್ಟ್- ಕಾರು ಎದುರುಗಡೆಯಿಂದ ಬಂದ ಮಾರುತಿ 800 ಕಾರು ಪರಸ್ಪರ ಡಿಕ್ಕಿ ಹೊಡೆದಿದ್ದು ಸ್ವಿಫ್ಟ್- ಕಾರಿನ ಚಾಲಕ ಮಹಾಬಲ ಶೆಟ್ಟಿ, ಕಾರಿನಲ್ಲಿದ್ದ ಮನ್ವಿತಾ, ಮಮತಾ, ಆಶಾ, ಅನ್ವಿತಾ, ಮತ್ತು ಮಾರುತಿ ಕಾರಿನಲ್ಲಿದ್ದ ಅಣ್ಣಿ ಗೌಡ ಎಂಬವರು ಗಾಯಗೊಂಡಿದ್ದು, ಗಾಯಾಳುಗಳೆಲ್ಲರನ್ನೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here