ನಿಡ್ಪಳ್ಳಿ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಶ್ರೀ ವಿಷ್ಣು ಮೂರ್ತಿ ದೇವಾಲಯ ಇರ್ದೆ ಇವುಗಳ ಆಶ್ರಯದಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ದೂಮಡ್ಕ, ಪೇರಲ್ತಡ್ಕ, ಗುಮ್ಮಟೆಗದ್ದೆ, ಅಜ್ಜಿಕಲ್ಲು, ಅಜಲಡ್ಕ, ರೆಂಜ, ಕಕ್ಕೂರು, ಚೂರಿಪದವು ಇವುಗಳ ಸಹಕಾರದೊಂದಿಗೆ 19 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವೇದ ಮೂರ್ತಿ ಶ್ರೀ ರಾಧಾಕೃಷ್ಣ ಭಟ್ ಕಕ್ಕೂರು ಇವರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಮೆ.21 ರಂದು ಇರ್ದೆ ಶ್ರೀ ವಿಷ್ಣು ಮೂರ್ತಿ ದೇವಾಲಯದಲ್ಲಿ ನಡೆಯಿತು. ಬೆಳಿಗ್ಗೆ ಪೂಜೆ ಪ್ರಾರಂಭವಾಗಿ ಮಧ್ಯಾಹ್ನ ಮಹಾ ಪೂಜೆ, ಧಾರ್ಮಿಕ ಪ್ರವಚನ ಮತ್ತು ಕಳೆದ ವರ್ಷದ ಲೆಕ್ಕ ಪತ್ರ ಮಂಡನೆ ಕಾರ್ಯಕ್ರಮ ನಡೆಯಿತು.
ಸಿಂಗಾರಿ ಮೇಳ ರಂಗ ಪ್ರವೇಶ:
ನೂತನವಾಗಿ ಆರಂಭಗೊಂಡ ಶ್ರೀ ವಿಷ್ಣು ಸಿಂಗಾರಿ ಮೇಳ ಇರ್ದೆ ಇದರ ರಂಗ ಪ್ರವೇಶ ಕಾರ್ಯಕ್ರಮ ನಡೆಯಿತು. ಶ್ರೀ ವಿಷ್ಣು ಮೂರ್ತಿ ದೇವಾಲಯದ ಪ್ರಧಾನ ಅರ್ಚಕ ಅನಂತರಾಮ ಮಡ್ಕುಳ್ಳಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದ ಮೂರ್ತಿ ರಾಧಾಕೃಷ್ಣ ಭಟ್ ಕಕ್ಕೂರು ಶುಭ ಹಾರೈಸಿದರು. ಸಿಂಗಾರಿ ಮೇಳದ ಗುರು ಉದಯ ಅಡೂರು ಇವರಿಗೆ ಗುರು ಕಾಣಿಕೆ ಸಲ್ಲಿಸಿ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ಘಾಟೆ, ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೈಲಾಡಿ ಉಪಸ್ಥಿತರಿದ್ದರು. ನಂತರ ನೂತನ ತಂಡದಿಂದ ಚೆಂಡೆ ವಾದನ ಪ್ರದರ್ಶನ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ದಾಮೋದರ ಪಾಟಾಳಿ ಸ್ವಾಗತಿಸಿ, ವಂದಿಸಿದರು. ಪೂಜಾ ಸಮಿತಿ ಕಾರ್ಯದರ್ಶಿ ಮೋಹನ್ ಚಂದ್ರ ಅಜ್ಜಿಕಲ್ಲು ಕಳೆದ ಪೂಜೆಯ ಲೆಕ್ಕ ಪತ್ರ ವಾಚಿಸಿದರು. ಪೂಜಾ ಸಮಿತಿ ಅಧ್ಯಕ್ಷ ಪುರಂದರ ಗೌಡ ಮತ್ತು ಪದಾಧಿಕಾರಿಗಳು, ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ತಂಡದ ಸದಸ್ಯರು ಸಹಕರಿಸಿದರು. ಯೋಜನೆಯ ವಲಯ ಮೆಲ್ವೀಚಾರಕ ಚಂದ್ರಶೇಖರ, ವಲಯಾಧ್ಯಕ್ಷ ಬಾಲಕೃಷ್ಣ ಹಾಗೂ ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.