ಪುತ್ತೂರಿನ ಹೊಟೇಲ್ ಕಾರ್ಮಿಕ, ಬಿಹಾರದ ಮೂಲದ ಯುವಕ ಸಂಪ್ಯ ಪ್ಲಾಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ

0

ಪುತ್ತೂರು: ಪುತ್ತೂರಿನ ಹೊಟೇಲ್ ಕಾರ್ಮಿಕ ಬಿಹಾರದ ಮೂಲದ ಯುವಕ ಸಂಪ್ಯದಲ್ಲಿ ತಾನು ತಂಗಿರುವ ಪ್ಲಾಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ.21ರಂದು ನಡೆದಿದೆ.


ಬಿಹಾರದ ಮೋತಿಹಲ್‌ ಜಿಲ್ಲೆಯ ಮುಕ್ಲೇಶ್ ಪುರ ನಿವಾಸಿ ನಂದಿಕಿಶೋರ್ ಸಹಾನಿಯವರ ಪುತ್ರ ಗುಡ್ಡು ಕುಮಾರ್ (18ವ.) ಆತ್ಮಹತ್ಯೆ ಮಾಡಿಕೊಂಡವರು. ಸುಳ್ಯ ಕಲ್ಲುಗುಂಡಿ ಎಂಬಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಗುಡ್ಡು ಕುಮಾರ್ ಮೂರು ದಿನಗಳ ಹಿಂದೆ ಎಪಿಎಂಸಿ ರಸ್ತೆಯಲ್ಲಿರುವ ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿ ಹೊಟೇಲ್ ನ ಇತರ ಸಿಬ್ದಿಂದಿಗಳ ಜೊತೆಗೆ ಸಂಪ್ಯದಲ್ಲಿರುವ ಪ್ಲಾಟ್‌ ನಲ್ಲಿ ವಾಸ್ತವ್ಯವಿದ್ದರು. ಬೆಳಿಗ್ಗೆ 9.30 ರ ನಂತರ ಹೋಟೆಲ್‌ ನ ಇಬ್ಬರು ಸಿಬ್ಬಂದಿಗಳು ಪ್ಲಾಟ್ ನಿಂದ ಕೆಲಸಕ್ಕೆ ಹೊರಡುವ ವೇಳೆ ಮಲಗಿದ್ದ ಗುಡ್ಡುಕುಮಾರ್‌ ಪ್ಲಾಟ್‌ ನಲ್ಲಿದ್ದ ಮತ್ತೋರ್ವ ಸಿಬ್ಬಂದಿ ಸ್ನಾನಕ್ಕೆ ತೆರಳಿದ ಸಂದರ್ಭದಲ್ಲಿ ಎರಡೂ ಬಾಗಿಲುಗಳನ್ನು ಬಂದ್ ಮಾಡಿ ಕೊಠಡಿಯೊಳಗಿನ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ನಾನ ಮುಗಿಸಿ ಬರುವ ಸಂದರ್ಭದಲ್ಲಿ ಎರಡೂ ಬಾಗಿಲುಗಳನ್ನು ಬಂದ್ ಮಾಡಿದ್ದು ಬಾಗಿಲು ಬಡಿದರು ಯಾರೂ ತೆರೆಯಲಿಲ್ಲ ಕೊನೆಗೆ ಹಿಂಭಾಗದ ಕಿಟಕಿಯ ಮೂಲಕ ಇಣುಕಿ ನೋಡಿದಾಗ ನೇಣು ಹಾಕಿಕೊಂಡು ನೇತಾಡುತ್ತಿರುವುದು ಕಂಡು ಬಂದಿತ್ತು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

LEAVE A REPLY

Please enter your comment!
Please enter your name here