ತೆಗ್ಗು ಕಟ್ಟೇಜಿರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

0

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅಲೆ ಆರಂಭವಾಗಿದೆ : ಅಬ್ದುಲ್ ಖಾದರ್ ಮೇರ್ಲ


ಪುತ್ತೂರು: ಸತತ ಭ್ರಷ್ಟಾಚಾರದಿಂದಲೇ ಗುರುತಿಸಿಕೊಂಡಿದ್ದ ಬಿಜೆಪಿ ಸರಕಾರದ ಆಡಳಿತದಿಂದ ಜನರು ಬೇಸತ್ತು ಹೋಗಿದ್ದು, ಭ್ರಷ್ಟಾಚಾರ ರಹಿತ ಜನಪರ ಆಡಳಿತಕ್ಕಾಗಿ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಜನ ಮಣೆ ಹಾಕಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅಲೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಮೋದಿ ಅಲೆ ಮಾಯವಾಗಿ ಕಾಂಗ್ರೆಸ್ ಅಲೆ ಭಾರತದಾದ್ಯಂತ ಪಸರಿಸಲಿದೆ ಎಂದು ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ ಹೇಳಿದರು.


ಅವರು ಮೇ.೨೦ ರಂದು ರಾತ್ರಿ ಕೆಯ್ಯೂರು ಗ್ರಾಮದ ಕಟ್ಟೇಜಿರ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಪುತ್ತೂರಿಗೆ ಓರ್ವ ಉತ್ತಮ ಶಾಸಕ ಸಿಕ್ಕಿದ್ದು ನಮ್ಮೆಲ್ಲರ ಭಾಗ್ಯ ಎಂದ ಅವರು, ಅಶೋಕ್ ಕುಮಾರ್ ರೈಯವರು ಬಡವರ, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ ವ್ಯಕ್ತಿಯಾಗಿದ್ದಾರೆ. ಈಗಾಗಲೇ ಸುಮಾರು ೨೨ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಸಹಾಯ ಮಾಡಿದ ಅವರು ಮುಂದಿನ ದಿನಗಳಲ್ಲಿ ಪುತ್ತೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡುತ್ತಾರೆ ಎಂದರು. ಕಾಂಗ್ರೆಸ್ ಜನರಿಗೆ ಕೊಟ್ಟಿದ್ದ ೫ ಗ್ಯಾರಂಟಿಗಳನ್ನು ಇಂದೇ ಜಾರಿ ಮಾಡಿದ್ದು ಆ ಮೂಲಕ ಕೊಟ್ಟ ಮಾತಿಗೆ ತಪ್ಪದ ಸರಕಾರವಾಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಗಟ್ಟಿ ಮಾಡುತ್ತಾ ಹೋಗೋಣ ಎಂದು ಹೇಳಿ, ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಇಡೀ ತಂಡಕ್ಕೆ ಶುಭಾಶಯ ಕೋರಿದರು.


ಪಟಾಕಿ ಸಿಡಿಸಿ, ಸಿದ್ದರಾಮಯ್ಯರಿಗೆ,ಡಿ.ಕೆ ಶಿವಕುಮಾರ್‌ರವರಿಗೆ ಜೈಕಾರ ಹಾಕುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಬ್ದುಲ್ ಖಾದರ್, ಅಬ್ದುಲ್ ಕುಂಞ, ಇಬ್ರಾಹಿಂ ಕಟ್ಟೇಜಿರ್, ಮಹಮ್ಮದ್ ಕಟ್ಟೇಜಿರ್, ಹನೀಫ್, ಕಮರುದ್ದೀನ್, ಸವಾದ್, ನೌಫಲ್, ಅನ್ಸಿದ್, ಅನ್ಸಾರ್, ಹಬೀದ್, ಮನ್ಸೂರ್, ಸಲ್ಮಾನ್, ಸಿದ್ದಿಕ್, ಮೂಸೆಕುಂಞ, ಸತ್ತಾರ್,ಆನಂದ ನಾಯ್ಕ್, ಮರಿಯಮ್ಮ, ಬೀಪಾತುಮ್ಮ, ಮಹಮ್ಮದ್ ಅರ್ಫಾಜ್ ಮೇರ್ಲ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here