ಕೆ.ಎಸ್.ಸಿ.ಎ ಮಂಗಳೂರು ವಲಯ ಅಂಡರ್-19 ಕ್ರಿಕೆಟ್-ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ಸೆಮಿಫೈನಲಿಗೆ

0

ಪುತ್ತೂರು:ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್(ಕೆ.ಎಸ್.ಸಿ.ಎ) ವತಿಯಿಂದ ಮೇ 18 ರಂದು ಪಣಂಬೂರಿನ ಎನ್.ಎಂ.ಪಿ.ಟಿ ಕ್ರೀಡಾಂಗಣದಲ್ಲಿ ನಡೆದ ಮಂಗಳೂರು, ಉಡುಪಿ, ಕೊಡಗುವನ್ನೊಳಗೊಂಡ ಅಂಡರ್-19 ಬಾಲಕರ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟಿನಲ್ಲಿ ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ತಂಡವು ಸೆಮಿಫೈನಲಿಗೆ ಪ್ರವೇಶ ಪಡೆದಿದೆ.

ಮತ್ತೊಮ್ಮೆ ಮಿಂಚಿದ ಇಶಾನ್:
ಮೊದಲು ಬ್ಯಾಟಿಂಗ್ ಮಾಡಿದ ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ತಂಡವು ಮಂಗಳೂರಿನ ಪಿ.ಪಿ.ಟಿ ತಂಡದ ವಿರುದ್ಧ 47.3 ಓವರ್ ಗಳಲ್ಲಿ 220 ರನ್ ಗಳಿಸಿ ಅಲೌಟಾಯಿತು. ಈ ಪಂದ್ಯದಲ್ಲಿಯೂ ಮಧ್ಯಮ ಕ್ರಮಾಂಕದ ಬ್ಯಾಟರ್ ಇಶಾನ್ ಪಿ.ಬಿರವರು ಸ್ಫೋಟಕ 38(25 ಎಸೆತ) ಇನ್ನಿಂಗ್ಸ್ ಆಡಿ ಮಿಂಚಿದರು. ಅವರು ಈ ಹಿಂದಿನ ಪಂದ್ಯದಲ್ಲಿ ಜುಗುಲ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಶತಕ ಸಿಡಿಸಿದ್ದರು. ತಂಡದ ಪರ ಆರಂಭಿಕ ಆಟಗಾರ ಮೈಕಲ್ ಶ್ರೇಯಲ್ 19, ವಿಷ್ಣು ಪ್ರಭು 15, ಸೃಜನ್ ಪಿ.ಅಮೀನ್ 23, ಕೆಳ ಕ್ರಮಾಂಕದ ಆಟಗಾರ ಆಶ್ಮಿತ್ ರೈ ಅಜೇಯ 35, ಜ್ಞಾನ್ ಎಸ್ 26, ಪ್ರಿನ್ಸ್ ರಾಯನ್ 10 ರನ್ ಗಳನ್ನು ಗಳಿಸಿದ್ದರು. ಎದುರಾಳಿ ಪಿ.ಪಿ.ಟಿ ತಂಡದ ಆರೋನ್ ರಾಬರ್ಟ್ 3 ವಿಕೆಟ್, ವಿವಿಯನ್ ಮಾರಿಸನ್ 2 ವಿಕೆಟ್ ಪಡೆದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಮಂಗಳೂರಿನ ಪಿ.ಪಿ.ಟಿ ತಂಡವು ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ತಂಡದ ಬೌಲರ್ ಗಳ ಕರಾರುವಾಕ್ ಬೌಲಿಂಗ್ ನಿಂದ ಕೇವಲ 201 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಯೂನಿಯನ್ ಕ್ರಿಕೆಟರ್ಸ್ ಪರ ಬೌಲರ್ ಗಳಾದ ಜ್ಞಾನ್ ಜೆ ಹಾಗೂ ಆಕಾಶ್ ಸಾಲಿಯಾನ್ ತಲಾ 2 ವಿಕೆಟ್, ಇಶಾನ್ ಪಿ.ಬಿ 1 ವಿಕೆಟ್ ಪಡೆದಿರುತ್ತಾರೆ ಎಂದು ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ಕಾರ್ಯದರ್ಶಿ ವಿಶ್ವನಾಥ್ ನಾಯಕ್, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here