ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಬಾಲಚಂದ್ರ ಪಟ್ಟೆ ನಿಧನ

0

ನಿಡ್ಪಳ್ಳಿ; ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಬಾಲಚಂದ್ರ ಗೌಡ ( 40) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೆ.20 ರಂದು ನಿಧನರಾದರು.
ಅಧಿಕ ರಕ್ತದೊತ್ತಡದಿಂದ ಬಳಲಿದ ಅವರನ್ನು ತಕ್ಷಣ ಪುತ್ತೂರು ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವರು ಕೊನೆಯುಸಿರೆಳೆದರು.

ಇವರು ಮುತ್ತೂಟ್ ಫೈನಾನ್ಸ್ ಉದ್ಯೋಗಿಯಾಗಿದ್ದು ಹಿಂದೆ ಕೊಚ್ಚಿ ಶಾಖೆಯಲ್ಲಿಯೂ ಸೇವೆ ಸಲ್ಲಿಸಿದ್ದು ಪ್ರಸ್ತುತ ಪುತ್ತೂರು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಉತ್ತಮ ಸಂಘಟಕ ಸ್ನೇಹಜೀವಿ;
ಶ್ರೀ ಕೃಷ್ಣ ಯುವಕ ಮಂಡಲ ಆರಂಬಿಸಲು ಕಾರಣಕರ್ತರೂ ಆಗಿದ್ದ ಇವರು ಯುವಕ ಮಂಡಲದಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ತಾನು ಮಂಚೂಣಿಯಲ್ಲಿ ನಿಂತು ಸಂಘಟಿಸುತ್ತಿದ್ದರು. ಪಟ್ಟೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿ ಸಂಘಟಕನಾಗಿದ್ದ ಇವರು ಸ್ನೇಹ ಜೀವಿಯಾಗಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಉತ್ತಮ ಕಲಾವಿದನೂ ಆಗಿದ್ದ ಇವರು ಆನೇಕ ಯಕ್ಷಗಾನ, ನಾಟಕಗಳಲ್ಲಿ ಪಾತ್ರ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ಇವರ ಅಗಲುವಿಕೆ ನೆರೆಹೊರೆಯವರಲ್ಲಿ ಅತೀವ ನೋವು ತಂದಿದೆ.

      ಸಂಘದ ಕಾರ್ಯಕರ್ತನಾಗಿ, ಬಿ.ಜೆ.ಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದ ಇವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರ ಕೆಲಸ ಮಾಡಿದ್ದು ಪೋಲಿಂಗ್ ಏಜೆಂಟ್ ಆಗಿಯೂ ಕೆಲಸ ಮಾಡಿದ್ದರು. 

        ಮೃತರು ಅವಿವಾಹಿತರಾಗಿದ್ದು ತಾಯಿ ವೆಂಕಮ್ಮ, ಸಹೋದರ ನವೀನ, ಅತ್ತಿಗೆ ಮಮತ, ತಂಗಿ ರೇಖಾ, ಭಾವ ಗೋಪಾಲಕೃಷ್ಣ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here