ಆಲಂಕಾರು ಗ್ರಾ.ಪಂ ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

0

ಆಲಂಕಾರು: ಆಲಂಕಾರು ಗ್ರಾ.ಪಂನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಮೆ.19 ರಿಂದ ಮೆ.27 ರ ತನಕ ನಡೆಯಲಿದೆ. ಗ್ರಾ.ಪಂ ಅಧ್ಯಕ್ಷ ಸದಾನಂದ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಪಂಚಾಯತ್ ಅಭಿವೃದ್ದಿ ಜಗನ್ನಾಥ ಶೆಟ್ಟಿಯವರು ಬೇಸಿಗೆ ಶಿಬಿರದ ಮಹತ್ವದ ಬಗ್ಗೆ ತಿಳಿಸಿದರು.ಪಂಚಾಯತ್ ಕಾರ್ಯದರ್ಶಿ ವಸಂತ ಶೆಟ್ಟಿಯವರು ಸ್ವಾಗತಿಸಿ,ಗ್ರಂಥಪಾಲಕಿ ಕಮಲ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಗ್ರಾ.ಪಂ ಸದಸ್ಯರು ಸೇರಿದಂತೆ ಮಕ್ಕಳ ಪೋಷಕರು ಸಹಕರಿಸಿದರು.

ಮಕ್ಕಳಲ್ಲಿ ಓದುವ ಹವ್ಯಾಸ,ಅಂಕಿಸಂಖ್ಯೆ, ವಿಜ್ಞಾನ ದ ವಿಷಯಗಳ ಬಗ್ಗೆ,ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸುವಿಕೆ, ಜಾನಪದ ಕಲೆ ,ಅಟೋಟ ಸ್ಪರ್ದೆ ,ರಸಪ್ರಶ್ನೆ,ನೃತ್ಯ ಇನ್ನಿತರ ವಿಚಾರದ ಬಗ್ಗೆ ಬೇಸಿಗೆ ಶಿಬಿರ ಕಲಿಸಲಾಗುವುದು ಎಂದು ಆಲಂಕಾರು ಪಂಚಾಯತ್ ,ಗ್ರಂಥಾಲಯ ಹಾಗು ಮಾಹಿತಿ ಕೇಂದ್ರದ ವತಿಯಿಂದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here