ನಿಮ್ಮಲ್ಲೂ ನಾವು ಹರ್ಷನನ್ನು ಕಾಣುತ್ತಿದ್ದೇವೆ-ಹರ್ಷ ಹೆತ್ತವರು

0

ಪುತ್ತೂರು: ನಾವೆಲ್ಲರೂ ಒಂದು ದಿನ ಇದೇ ಪರಿಸ್ಥಿತಿಯಲ್ಲಿ ಬೆಡ್ ನಲ್ಲಿ ಮಲಗಬಹುದು ಅಂತ ಅನಿಸುತ್ತಿದೆ. ನಮ್ಮ ಜತೆ ಪ್ರತಿಯೊಬ್ಬರೂ ಬದಲಾದರೆ ಮಾತ್ರ ಹಿಂದುತ್ವ ಉಳಿಸಿಕೊಳ್ಳಲು ಸಾಧ್ಯ. ಈ ಘಟನೆ ನೋಡಿ ನಮಗೆ ಸಂಕಟವಾಗುತ್ತಿದೆ. ನಮ್ಮ ಹಿಂದುತ್ವವನ್ನು ನಾವು ಮಾರಿಕೊಂಡರೆ ಬದುಕಿದ್ದು ವೇಸ್ಟ್‌ ಎಂದು ಶಿವಮೊಗ್ಗದಲ್ಲಿ ಹತ್ಯೆಯಾಗಿದ್ದ ಹರ್ಷ ಹೆತ್ತವರು ಹೇಳಿದ್ದಾರೆ.

ನಗರದ ಆಸ್ಪತ್ರೆಯಲ್ಲಿ ಬ್ಯಾನರ್‌ ಪ್ರಕರಣದಲ್ಲಿ ಪೊಲೀಸ್‌ ದೌರ್ಜನ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಹಿಂದೂ ಕಾರ್ಯಕರ್ತರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು ಹರ್ಷ ಟೈಮ್‌ನಲ್ಲಿ 5 ವರ್ಷ ಇಂತಹ ನೋವು ನಾವು ಅನುಭವಿಸಿದ್ದೇವೆ. ನಿಮ್ಮಲ್ಲೂ ನಾವು ಹರ್ಷನನ್ನು ಕಾಣುತ್ತಿದ್ದೇವೆ ಎಂದು ಹೇಳಿದ ಅವರು, ಇವರು ಮಾಡಿದ ತಪ್ಪೇನು? ಹಾಗಿದ್ರೆ ಕಾರ್ಯಕರ್ತರಿಗೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here