ಹಿರೇಬಂಡಾಡಿ ವಿದ್ಯುತ್ ಅಪಘಾತಕ್ಕೆ ಬಲಿ

0

ಉಪ್ಪಿನಂಗಡಿ: ವಿದ್ಯುತ್ ಆಘಾತಕ್ಕೆ ಯುವಕನೋರ್ವ ಬಲಿಯಾದ ಘಟನೆ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌ನ ಕುಮಾರಧಾರ ನದಿ ತೀರದಲ್ಲಿ ನಡೆದಿದೆ.


ದ್ವಿತೀಯ ಪಿಯುಸಿ ಪೂರ್ತಿಗೊಳಿಸಿ ಮುಂದಿನ ಶಿಕ್ಷಣದ ಕನಸು ಕಾಣುತ್ತಿದ್ದ ಶರೀಪುದ್ದೀನ್ (19) ಮೃತ ಯುವಕ. ಈ ಬಗ್ಗೆ ಮೃತರ ಮಾವ ಹಿರೇಬಂಡಾಡಿ ಗ್ರಾಮದ ಪೆರಾಬೆ ನಿವಾಸಿ ಬಿ. ಹಮ್ಮಬ್ಬ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ನನ್ನ ತಂಗಿ ಹಾಗೂ ಆಕೆಯ ಮಗ ಶರೀಪುದ್ದೀನ್ ನನ್ನ ಮನೆಯಲ್ಲಿದ್ದು, ಮೇ 21ರಂದು ಸಂಜೆ 7.30ಕ್ಕೆ ನನಗೆ ಸಾರ್ವಜನಿಕರು ಫೋನಾಯಿಸಿದ್ದು, ನಿಮ್ಮ ಅಳಿಯ ಶರೀಪುದ್ದೀನ್‌ರಿಗೆ ಸಂಜೆ 6ರಿಂದ 6.30ರ ಮಧ್ಯೆ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌ನ ಕುಮಾರಧಾರ ನದಿ ಕಿನಾರೆಯ ಬಳಿ ವಿದ್ಯುತ್ ಸ್ಪರ್ಶವಾಗಿದ್ದು, ಅಸ್ವಸ್ಥಗೊಂಡ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದ್ದರು. ಅಲ್ಲಿಗೆ ಹೋಗಿ ನೋಡಿದಾಗ ಶರೀಪುದ್ದೀನ್ ಮೃತಪಟ್ಟಿದ್ದ. ಆತನ ಎದೆ ಭಾಗದಲ್ಲಿ ವಿದ್ಯುತ್ ಸ್ಪರ್ಶ ಆಗಿರುವುದು ಕಂಡು ಬಂದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here