ದಾಡ್ಜ್ ಬಾಲ್-ಭಾರತ ತಂಡದ ತರಬೇತುದಾರರಾಗಿ ಉಪ್ಪಿನಂಗಡಿಯ ಯುವಕ

0

ಉಪ್ಪಿನಂಗಡಿ: ಏಷ್ಯನ್ ಪೆಸಿಫಿಕ್ ಅಂತರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ತಂಡದ ಪುರುಷ ಮತ್ತು ಮಹಿಳೆಯರ ಮಿಶ್ರ ತಂಡದ ತರಬೇತುದಾರರಾಗಿ ಉಪ್ಪಿನಂಗಡಿಯ ವಿಜೇತ್ ಕುಮಾರ್ ಜೈನ್‌ರವರನ್ನು ನೇಮಕಗೊಳಿಸಲಾಗಿದೆ.


ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಇವರು, ಪ್ರಸಕ್ತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ಎಂ.ಪಿ.ಇ ಡಿ ಸ್ನಾತಕೋತರ ಪದವಿಯನ್ನು ಪೂರೈಸುತ್ತಿದ್ದು, ಇವರ ಯಶಸ್ವಿ ತರಬೇತುದಾರಿಕೆಯನ್ನು ಪರಿಗಣಿಸಿ ಇಂಡಿಯನ್ ಡಾಡ್ಜ್ ಬಾಲ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ. ನರಸಿಂಹ ರೆಡ್ಡಿ ಯವರು ಇವರನ್ನು ಭಾರತ ತಂಡದ ತರಬೇತುದಾರನನ್ನಾಗಿ ನೇಮಕಗೊಳಿಸಿದ್ದಾರೆ.
ಇದೇ ಬರುವ ಮೇ.25 ರಿಂದ 28 ರ ವರೆಗೆ ಮಲೇಶ್ಯಾದಲ್ಲಿ ವಿಶ್ವ ಡಾಡ್ಜ್ ಬಾಲ್ ಫೆಡರೇಶನ್, ಏಷ್ಯನ್ ಡಾಡ್ಜ್ ಬಾಲ್ ಫೆಡರೇಶನ್, ಮಲೇಶ್ಯಾ ಡಾಡ್ಜ್ ಬಾಲ್ ಅಸೋಸಿಯೇಷನ್ ಇವುಗಳ ಸಹಯೋಗದಲ್ಲಿ ನಡೆಯಲಿರುವ ಏಷಿಯನ್ ಪೆಸಿಫಿಕ್ ಅಂತರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್ ಶಿಪ್‌ಗೆ ಭಾರತ ತಂಡವನ್ನು ಇವರು ತರಬೇತುಗೊಳಿಸಲಿದ್ದಾರೆ. ಪ್ರಸಕ್ತ ಬೆಂಗಳೂರಿನಲ್ಲಿ ತರಬೇತು ನೀಡುತ್ತಿರುವ ಇವರು ಭಾರತ ತಂಡದೊಂದಿಗೆ ಬುಧವಾರದಂದು ಚೆನೈ ವಿಮಾನ ನಿಲ್ದಾಣದಿಂದ ಮಲೇಶ್ಯಾ ದೇಶಕ್ಕೆ ಪ್ರಯಾಣಿಸಲಿದ್ದರೆ.

LEAVE A REPLY

Please enter your comment!
Please enter your name here