ಪೊಲೀಸರಿಗೆ ಒತ್ತಡ ತರುವವರು ಮೋದಿ, ಯೋಗಿಗಿಂತ ದೊಡ್ಡವರಾ ?-ಅಭಿನವ ಭಾರತದ ಸಬಾ ಚಾಲಕ್ ಧರ್ಮೇಂದ್ರ ಪತ್ರಿಕಾಗೋಷ್ಠಿ

0

ಪುತ್ತೂರು: ಈ ಹಿಂದೆ ಪಾಕಿಸ್ತಾನ ಜಿಂದಾಬಾದ್ ಹೇಳುವಾಗ, ಮೋದಿಯ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಬೆಂಕಿ ಕೊಡಲು ಪ್ರಯತ್ನಿಸಿದಾಗ, ಯೋಗಿ ಪ್ರತಿಕೃತಿಯನ್ನು ದಹನ ಮಾಡುವಾಗ ಸುಮ್ಮನಿದ್ದು, ಪುತ್ತೂರಿನಲ್ಲಿ ನಾಯಕರಿಬ್ಬರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದಾಗ ಯಾಕೆ ಸಿಟ್ಟು ಬಂದಿದೆ. ನೀವು ಯೋಗಿ ಮೋದಿಗಿಂತ ದೊಡ್ಡವರಾ ಎಂದು ಅಭಿನವ ಭಾರತದ ಸಬಾ ಚಾಲಕ್ ಧರ್ಮೇಂದ್ರ ಅವರು ಇಲ್ಲಿನ ಹಿಂದು ಕಾರ್ಯಕರ್ತರಿಗೆ ಹಲ್ಲೆ ನಡೆಸಲು ಪೊಲೀಸರಿಗೆ ಒತ್ತಡ ತಂದವರನ್ನು ಪ್ರಶ್ನೆ ಮಾಡಿದ್ದಾರೆ.


ಪುತ್ತೂರಿನಲ್ಲಿ ಅಖಿಲ ಭಾರತ ಹಿಂದು ಮಹಾಸಭಾ ಮತ್ತು ಅಭಿನವ ಭಾರತದ ಸಬಾದ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯವರು ಮೋದಿ, ಯೋಗಿ ಹೆಸರಿನಲ್ಲಿ ಮತವನ್ನು ಪಡೆಯುತ್ತಾರೆ. ಆದರೆ ವೈಯುಕ್ತಿಕವಾಗಿ ನೈತಿಕತೆ ಕ್ಯಾಪಸಿಟಿ ಇಲ್ಲದೆ ಇದ್ದರೆ ನಿಮ್ಮ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಬಲಿಪಶು ಆಗುತ್ತಾರೆ ಎಂದಾಗ ಆಕ್ರೋಶ ವ್ಯಕ್ತಪಡಿಸುವುದು ಸಹಜ. ಅಂತಹ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಹಿಂಸೆ ನೀಡುವುದು ಸರಿಯಲ್ಲ. ಪೊಲೀಸರಿಂದಲೂ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಈ ರೀತಿ ಮುಂದುವರಿದರೆ ಹಿಂದುಗಳ ಪರಿಸ್ಥಿತಿ ಯಾವ ಮಟ್ಟಕ್ಕೆ ಮುಟ್ಟಬಹುದು ಎಂದ ಅವರು ಒಂದು ಸಮಯದಲ್ಲಿ ಕನಿಷ್ಠ ಪಕ್ಷ ಹಿಂದುತ್ವಕ್ಕೆ ಬೆಂಬಲ ಸಿಗಬೇಕೆಂದು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಯತ್ನ ಯಾಕೆ ಮಾಡಿದ್ದೆವು. ಆದರೆ ಆ ಹಿಂದು ಅನ್ನುವ ಹೆಸರಿನಲ್ಲೇ ಅಧಿಕಾರಕ್ಕೆ ಬಂದ ಬಿಜೆಪಿ ಅವರ ಕಾರ್ಯಕರ್ತರ ಮೇಲೆ ದಬ್ಬಾಳಿಗೆ ಮಾಡುತ್ತಿದೆ ಎಂದರು.


ಡಿವೈಎಸ್ಪಿ ಅಮಾನತು ಮಾಡುವಂತೆ ನ್ಯಾಯಾಲದಲ್ಲಿ ಪ್ರಶ್ನೆ:
ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಗಾಯಾಳುಗಳ ಹೇಳಿಕೆಯಂತೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಆದರೆ ಇಲ್ಲಿ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಗಳನ್ನಷ್ಟೆ ಅಮಾನತು ಮಾಡಲಾಗಿದೆ. ಆದರೆ ಇದರ ಮೂಲ ಡಿವೈಎಸ್ಪಿ. ಅವರನ್ನು ಅಮಾನತು ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದ ಧರ್ಮೇಂದ್ರ ಅವರು ಈ ಕುರಿತು ನಾವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿದ್ದೇವೆ ಎಂದರು. 60 ವರ್ಷದ ಬಳಿಕ ನಿಮ್ಮ ಖಾಕಿ ಕಳಚುತ್ತದೆ. ಆ ನಂತರ ನೀವು ನಮ್ಮಂತ ಸಾಮಾನ್ಯ ವ್ಯಕ್ತಿ. ಆಗ ನೀವು ಯಾವ ಮಟ್ಟಕ್ಕೆ ತಲುಪುತ್ತೀರಿ ಎಂಬುದನ್ನು ಆಲೋಚನೆ ಮಾಡಬೇಕು. ಪೊಲೀಸ್ ದೌರ್ಜನ್ಯ ಇಲ್ಲಿಗೆ ನಿಲ್ಲಿಸಬೇಕು. ಇಲ್ಲವಾದರೆ ಬಿಜೆಪಿಯೇತರ ಹಿಂದು ಸಂಘಟನೆಯನ್ನು ಒಗ್ಗೂಡಿಸಿಕೊಂಡು ಪೊಲೀಸರ ವಿರುದ್ಧ ಹೋರಾಟವನ್ನು ಮಾಡುವ ಅನಿವಾರ್ಯತೆ ಬರಬಹುದು ಎಂದು ಎಚ್ಚರಿಕೆ ನೀಡಿದರು.


ತಾಕತ್ತಿದ್ದರೆ ಪುತ್ತಿಲರ ಶೇ.10 ಮತ ಪಡೆಯಲಿ:
ಹಿಂದು ಕಾರ್ಯಕರ್ತರಿಗೆ ಹಲ್ಲೆ ನಡೆಸಲು ಕುಮ್ಮಕ್ಕು ಕೊಟ್ಟ ಸಂಸದರು ತಾಕತ್ತಿದ್ದರೆ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಆ ಬಳಿಕ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಪುತ್ತಿಲರ ಶೇ.10ರಷ್ಟು ಮತ ಪಡೆಯಲು ಸಾಧ್ಯವಿಲ್ಲ ಎಂದು ಧರ್ಮೇಂದ್ರ ಹೇಳಿದರು.


ಹರೀಶ್ ಪೂಂಜಾ ಅವರಿಗೆ ನೈತಿಕತೆಯಿಲ್ಲ:
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸತ್ಯಜೀತ್ ಸುರತ್ಕಲ್, ಮಹೇಶ್ ತಿಮರೋಡಿ, ಪ್ರವೀಣ್ ವಾಲ್ಕೆ ಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕೇವಲ ಹೈ ಕೋರ್ಟ್ ವಕೀಲನಾಗಿ ನಿನ್ನೆ ಮೊನ್ನೆ ಅಧಿಕಾರ ಸಿಕ್ಕಿದ ತಕ್ಷಣ ಬಾಯಿಗೆ ಬಂದ ಹಾಗೆ ಮಾತನಾಡಬಹುದು ಎಂದರೆ ಅದು ತಪ್ಪು. ಹೇಗೆ ಪೀಠದಲ್ಲಿ ಕೂರಿಸಲು ಗೊತ್ತಿದೆಯೋ ಅದೇ ರೀತಿ ಇಳಿಸಲು ಕೂಡಾ ಗೊತ್ತಿದೆ. ಮಾತನಾಡುವಾಗ ಇತಿಮಿತಿಗಳನ್ನು ಇಟ್ಟುಕೊಂಡು ಮಾತನಾಡಬೇಕು ಎಂದ ಅವರು ಹರೀಶ್ ಪೂಂಜಾ ಇರಬಹುದು ಅಥವಾ ಬಿಜೆಪಿಯಿಂದ ಆಯ್ಕೆಯಾದ ಶಾಸಕರು ನೈತಿಕೆ ಇದ್ದರೆ ಮೌನವಾಗಿ ಕೂತುಕೊಳ್ಳಬೇಕು. ಬಡವರಿಗೆ, ಹಿಂದು ಕಾರ್ಯಕರ್ತರಿಗೆ ಸಹಾಯ ಮಾಡಿ. ಅದು ಬಿಟ್ಟು ಹಿಂಬಾಗಿಲಿನಿಂದ ನಿಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ಹಿಂಸೆ ಮಾಡುವುದಾದರೆ ಎಲ್ಲಾ ಬಿಜೆಪಿಯೇತರ ಸಂಘಟನೆಗಳನ್ನು ಜೊತೆ ಸೇರಿಸಿಕೊಂಡು ಹೋರಾಟ ಮಾಡಬೇಕಾಗುತ್ತದೆ ಎಂದು ಧರ್ಮೇಂದ್ರ ಎಚ್ಚರಿಕೆ ನೀಡಿದರು. ಹೋರಾಟದ ಹಾದಿಯಲ್ಲಿ ಕೇಸು, ಹೊಡೆದಾಟ, ಬಡಿದಾಟ ಮಾಮೂಲಿ. ಆದರೆ ಒಬ್ಬ ಶಾಸಕನ, ಮಂತ್ರಿಯ ಮಗನಾದರೂ ಬಜರಂಗದಳ, ಹೋರಾಟದಲ್ಲಿ ಇದ್ದಾನೆಯೇ ಎಂಬುದನ್ನು ತೋರಿಸಬೇಕು. ಯಾರೋ ಒಬ್ಬ ಬಡಪಾಯಿ ತಾಯಿ ತನ್ನ ಮಗನನ್ನು ದಾನ ಮಾಡಿದ್ದರಿಂದ ಬಿಜೆಪಿ ನಾಯಕರು ಪೀಠದಲ್ಲಿ ಕೂತುಕೊಳ್ಳುತ್ತಾರೆ ಮತ್ತೆ ಎಲ್ಲವನ್ನು ಮರೆಯುತ್ತಾರೆ ಎಂದರು.


ಬಿಜೆಪಿ ಶಾಸಕರಿಗೆ, ಸಂಸದರಿಗೆ ನೈತಿಕತೆ ಇಲ್ಲ:
ಬಿಜೆಪಿ ಶಾಸಕರಾಗಲಿ, ಸಂಸದರಿಗೂ ಯಾವುದೇ ನೈತಿಕೆ ಇಲ್ಲ. 5 ವರ್ಷಗಳ ಹಿಂದೆ ಬಿಜೆಪಿ ವಿರೋಧ ಪಕ್ಷದಲ್ಲಿರುವಾಗ ಎಷ್ಟೋ ಹಿಂದು ಸಮಾಜೋತ್ಸವ ಮಾಡಿತ್ತು. ಆದರೆ ಅಧಿಕಾರದಲ್ಲಿರುವಾಗ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಅಖಿಲ ಭಾರತ ಹಿಂದು ಮಹಾಸಭಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪುನಿತ್ ಸುವರ್ಣ ಅವರು ಇದನ್ನು ಪ್ರಶ್ನೆ ಮಾಡಿದವರನ್ನು ತೊಂದರೆ ಕೊಡುವ ಕೆಲಸ ಬಿಜೆಪಿಯಿಂದ ಆಗಿದೆ. ಸಂಘದ ಶಿಕ್ಷಣದಲ್ಲಿ ವ್ಯಕ್ತಿ ಮುಖ್ಯವಲ್ಲ. ಭಗವಧ್ವಜವೇ ಮುಖ್ಯ. ಅದೇ ಹಿಂದೆ ಸಿದ್ದರಾಮಯ್ಯ ಸರಕಾರ ಇರುವಾಗ ಮುಸಲ್ಮಾನರ ಮೇಲಿನ ಕೇಸು ಹಿಂಪಡೆಯಲಾಯಿತು. ಆದರೆ ಬಿಜೆಪಿ ಸರಕಾರ ಬಂದಾಗ ಹಿಂದು ಕಾರ್ಯಕರ್ತರ ಮೇಲಿನ ಕೇಸು ಹಿಂಪಡೆಯಲಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಎಷ್ಟೋ ಹಿಂದುಗಳನ್ನು ಗಡಿಪಾರು ಮಾಡಲಾಗಿದೆ ಎಂದರು.


ನಮಗೆ ಧರ್ಮ ಮುಖ್ಯ:
ಮೋದಿ ಮುಖ್ಯವೇ?, ಧರ್ಮ ಮುಖ್ಯವೇ? ಎಂದು ಪ್ರಶ್ನೆ ಮಾಡಿದರೆ ನಮಗೆ ಧರ್ಮ ಮುಖ್ಯ. ಧರ್ಮದ ಪರವಾಗಿ ಯಾರು ನಿಲ್ಲುತ್ತಾರೋ ಅವರ ಪರ ನಾವಿದ್ದೇವೆ ಎಂದು ಪುನಿತ್ ಸುವರ್ಣ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಅಭಿನವ ಭಾರತ ಜಿಲ್ಲಾ ಸಂಚಾಲಕ ಪ್ರೇಮ್ ಪೊಳಲಿ ಅವರು ಉಪಸ್ಥಿತರಿದ್ದರು.

ನಾನು ಗಾಂಧಿವಾದಿಯಲ್ಲ, ಗೋಡ್ಸೆವಾದಿ
ನಮ್ಮ ತತ್ವ ಸಿದ್ದಾಂತ ವೀರ ಸಾರ್ವಕರ್, ನಾಥುರಾಮ್ ಗೋಡ್ಸೆ ಅವರನ್ನು ಅನುಸರಿಸುವವರು. ನಾನು ಎದೆ ತಟ್ಟಿ ಹೇಳುತ್ತೇನೆ. ನಾನು ಗಾಂಧಿವಾದಿಯಲ್ಲ. ಗೋಡ್ಸೆವಾದಿ. ಅಖಂಡ ಭಾರತದ ಹಿಂದು ರಾಷ್ಟ್ರದ ಕಲ್ಪನೆ ಬರೆದವರು ಪಂಡಿತ್ ಗೋಡ್ಸೆ ಮತ್ತು ಸಾವರ್ಕರ್.
–ಪುನಿತ್ ಸುವರ್ಣ, ಅಖಿಲ ಭಾರತ ಹಿಂದು ಮಹಾಸಭಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷರು

ನಳಿನ್ ಕುಮಾರ್ ಕಾರು ಅಲುಗಾಡಿದಕ್ಕೆ ಮನೆ ಕಟ್ಟಿಕೊಟ್ಟರು !
ಕಳೆದ ಬಾರಿ ಚುನಾವಣೆಯಲ್ಲಿ ಎಷ್ಟೋ ಹೆಣಗಳು ಬಿದ್ದಿವೆ. ಆ ಹೆಣದ ಮೇಲೆ ರಾಜಕೀಯ ಮಾಡಿದರು. ಈ ಬಾರಿ ಹೆಣ ಬೀಳಲಿಲ್ಲ. ಹಾಗಾಗಿ ಸೋತ್ತಿದ್ದಾರೆ. ದಿ ಹರ್ಷನ ಮನೆಯವರಿಗೆ ಯಾವುದೇ ಸ್ಥಾನ ಮಾನ ಕೊಡಲಿಲ್ಲ. ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಮನೆ ಮಾಡಿ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಆದರೆ ನಳಿನ್ ಕುಮಾರ್ ಕಟೀಲ್ ಅವರ ಕಾರು ಅಲುಗಾಡಿದಕ್ಕೆ ಅಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಕಾರಿನ ಬದಲು ಅವರನ್ನೇ ಹಿಡಿದು ಅಲುಗಾಡಿಸಬೇಕಾಗಿತ್ತು. ನಾನಿದ್ದರೆ ಅದನ್ನೇ ಮಾಡುತ್ತಿದ್ದೆ ಎಂದು ಪುನಿತ್ ಸುವರ್ಣ ಹೇಳಿದರು.

ಪುತ್ತಿಲರಿಗೆ ಶಾಸಕ ಸ್ಥಾನ ಕೊಡಬೇಕಾಗಿತ್ತು:
ಪುತ್ತಿಲರಿಗೆ ಶಾಸಕ ಸ್ಥಾನ ಕೊಡಬೇಕಾಗಿತ್ತು. ಅದು ಅವರ ಹಕ್ಕು. ನಾವು ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಲ್ಲ ಜನಸಂಘದಿಂದ ಪಕ್ಷಕ್ಕೆ ಬಂದವರು. ಪುತ್ತಿಲರವರು ಕೇಳುವುದರಲ್ಲಿ ತಪ್ಪಿಲ್ಲ. ಅಧಿಕಾರಕ್ಕೆ ಬಂದವರು ಅದನ್ನು ಅವರಿಗೆ ಕೊಡಬೇಕಾಗಿತ್ತು. ಇಡಿ ಕಾರ್ಯಕರ್ತರಿಗೆ ಪುತ್ತಿಲ ಬೇಕೆನ್ನುವಾಗ ಸೌಜನ್ಯಕ್ಕಾದರೂ ಅವರಿಗೆ ಕೊಡಬೇಕಾಗಿತ್ತು. ಆ ನೈತಿಕತೆ ಬಿಜೆಪಿಗೆ ಇಲ್ಲ ಎಂದಾದರೆ ಮತ್ತೆ ಯಾವ ರೀತಿಯಲ್ಲಿ ಆಡಳಿತ ಮಾಡುತ್ತಾರೆ ಎಂದು ಧರ್ಮೇಂದ್ರ ಅವರು ಹೇಳಿದರು.

ಹರೀಶ್ ಪೂಂಜಾರಿಂದ ಸ್ವಜನಪಕ್ಷಪಾತ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಕಳೆದ ಭಾರಿ ಸುಮಾರು 25ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಯಾಕೆ ಮತಗಳ ಅಂತರ ಕಡಿಮೆಯಾಗಿದೆ ಎಂದು ಪ್ರಶ್ನಿಸಿದ ಅಖಿಲ ಭಾರತ ಹಿಂದು ಮಹಾಸಭಾದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪುನಿತ್ ಸುವರ್ಣ ಅವರು ಇಲ್ಲಿ ಕಾಂಗ್ರೆಸ್ ಮತ ಎಳೆದಿಲ್ಲ. ನೀವು ಮಾಡಿದ ಸ್ವಜಪಕ್ಷಪಾತದಿಂದ ಮತಗಳ ಅಂತರ ಕಡಿಮೆ ಆಗಿದೆ ಎಂದರು. ಇದೇ ಶಾಸಕರು ಬರುವ ಮುಂದೆ ಬೆಳ್ತಂಗಡಿ ಹಿಂದುತ್ವದ ಭದ್ರಕೋಟೆಯಾಗಿತ್ತು. ಇವರು ಬಂದ ಬಳಿಕ ಹಿಂದುತ್ವ 5 ಭಾಗವಾಗಿ ಒಡೆದಿದೆ. ಈ ಹಿಂದೆ ಶಾಸಕ ಹರೀಶ್ ಪೂಂಜಾ, ಸುನಿಲ್ ಕುಮಾರ್ ಆಗಲಿ ಅಧಿಕಾರ ಬೇಕೋ, ಹಿಂದುತ್ವ ಬೇಕೋ ಪ್ರಶ್ನೆ ಮಾಡಿದಾಗ ಹಿಂದುತ್ವದ ಪರ ನಿಲ್ಲುತ್ತೇನೆಂದಿದ್ದರು. ಆದರೆ ಅಧಿಕಾರ ಬಂದಾಗ ಎಲ್ಲವನ್ನು ಮರೆತ್ತಿದ್ದಾರೆ. ಇವತ್ತು ಅರುಣ್ ಕುಮಾರ್ ಪುತ್ತಿಲ, ಪ್ರಮೋದ್ ಮುತಾಲಿಕ್ ಅವರು ಸಹ ಹಿಂದುತ್ವವಾದಿಯಾಗಿದ್ದಾರೆ. ಹರೀಶ್ ಪೂಂಜಾ ಅವರು ತನಗೆ ಬೆಂಬಲ ಕೊಟ್ಟ ಮಹೇಶ್ ತಿಮರೋಡಿಯವರನ್ನೇ ಕೈ ಬಿಟ್ಟಿದ್ದಾರೆ. ಹಿರಿಯರಾದ ಪ್ರವೀಣ್ ವಾಲ್ಕೆಯವರ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ. ಹೀಗೆ ಹಿಂದುಗಳ ವಿರುದ್ಧವಾಗಿ ಮಾತನಾಡುವುದು ಉತ್ತಮ ಸಂಸ್ಕೃತಿಯಲ್ಲ. ನಾವು ಹರೀಶ್ ಪೂಂಜಾ, ನಳಿನ್ ಕುಮಾರ್ ಕಟೀಲ್ ಅವರಿಗೆ ಮತ ಹಾಕಿದಲ್ಲ ಭಗವಧ್ವಜ ಎಂಬ ಸಿದ್ಧಾಂತಕ್ಕೆ ಮತ ಹಾಕಿದ್ದು. ಇವತ್ತು ರಾಮಮಂದಿರ ಹೋರಾಟದಲ್ಲಿ ಮುಖ್ಯಪಾತ್ರ ಅಖಿಲ ಭಾರತ ಹಿಂದು ಮಹಾಸಭದ್ದು, ಅದರ ಪ್ರಯೋಜನ ಪಡೆದಿರುವುದು ಬಿಜೆಪಿ. ಬೆಳ್ತಂಗಡಿ ಶಾಸಕರು ಮಸೀದಿಗೆ ಎಷ್ಟೋ ಕೋಟಿ ಅನುದಾನ ಕೊಟ್ಟಿದ್ದಾರೆ. ಚರ್ಚ್‌ಗೆ ಎಷ್ಟೋ ಎಕ್ರೆ ಜಾಗ ಕೊಟ್ಟಿದ್ದಾರೆ. ಹಿಂದು ದೇವಸ್ಥಾನಕ್ಕೆ ಎನು ಕೊಟ್ಟಿದ್ದಾರೆ. ಅವರ ಹಿಂದುತ್ವ ಎಲ್ಲಿ ಹೋಗಿದೆ. ನಾವು ಯಾವುದೇ ಧರ್ಮದ ಅಪಪ್ರಚಾರಕರಲ್ಲ. ನಾವು ನಮ್ಮ ಧರ್ಮದ ಪೂಜಕರು ಎಂದರು.

LEAVE A REPLY

Please enter your comment!
Please enter your name here