ಕುಡ್ಗಿ ಸುಧಾಕರ ಶೆಣೈ ಮೆಮೋರಿಯಲ್‌ ಎಕ್ಸಲೆನ್ಸ್‌ ಅವಾರ್ಡ್‌ ವಿತರಣಾ ಸಮಾರಂಭ

0

ಪುತ್ತೂರು: ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಕುಡ್ಗಿ ಸುಧಾಕರ ಶೆಣೈ ಮೆಮೋರಿಯಲ್‌ ಎಕ್ಸಲೆನ್ಸ್‌ ಅವಾರ್ಡ್‌ ವಿತರಣಾ ಕಾರ್ಯಕ್ರಮವು ಮೇ.16ರಂದು ನಡೆಯಿತು.

ಸಂಸ್ಥೆಯ ಹಿರಿಯ ವಿದ್ಯಾರ್ಥಿ ಶ್ರೀ ಕುಡ್ಗಿ ಸುಧಾಕರ ಶೆಣೈ ಅವರ ನೆನೆಪಿನಲ್ಲಿ 2022-23ನೇ ಸಾಲಿನ ಎಸ್‌ ಎಸ್‌ ಎಲ್‌ ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಾದ ಶ್ರೇಯಾ ಎಸ್(613)‌, ಕೆ ಈಶಾನಿ(610), ಹಾಗೂ ಭವಿತಾ (609) ಇವರಿಗೆ ತಲಾ 5000, 3000, 2000 ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಶ್ರೀ ಆರ್‌ ಕೆ ಭಟ್‌ ಇವರು ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಶ್ರೀಮತಿ ಶೀಲಾ ಭಟ್‌ ಇವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಪ್ರಮಾಣ ಪತ್ರ ಹಾಗೂ ಚೆಕ್ಕುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಿದರು. ಶ್ರೀಕಾಂತ್‌ ಶೆಣೈ ಉಪಸ್ಥಿತಿತರಿದ್ದರು. ಉಪಪ್ರಾಂಶುಪಾಲರಾದ ಶ್ರೀ ವಸಂತ ಮೂಲ್ಯ ಇವರು ಸ್ವಾಗತಿಸಿ ಶುಭ ಹಾರೈಸಿದರು. ಸಹ ಶಿಕ್ಷಕಿ ಸ್ಮಿತಾ ಕೆ.ಎನ್‌ ವಂದಿಸಿದರು. ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here