ಮೇ 26: ‘ಪಿರ್ಕಿಲು’ ತುಳು ಸಿನಿಮಾ ಬಿಡುಗಡೆ

0

ಪುತ್ತೂರು: ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ ಮತ್ತು ರಾಮಕುಂಜದ ಶಿವಪ್ರಸಾದ್ ಇಜ್ಜಾವು ಇವರ ನಿರ್ಮಾಣದಲ್ಲಿ ಹೆಡ್ ಡಿ ಆರ್ಯಾ ಅವರ ನಿರ್ದೇಶನದಲ್ಲಿ ತಯಾರಾದ ‘ಪಿರ್ಕಿಲು’ ತುಳು ಸಿನಿಮಾ ಮೇ 26ಕ್ಕೆ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ದೇಶಕ ಎಚ್.ಡಿ.ಆರ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಹಾಸ್ಯವನ್ನೊಳಗೊಂಡ ಕೌಟುಂಬಿಕ ಸಿನೆಮಾ ಇದಾಗಿದ್ದು ಕುಟುಂಬ ಸಮೇತರಾಗಿ ನೋಡಬಹುದು. ಚಿತ್ರವು ಪುತ್ತೂರಿನ ಭಾರತ್ ಸಿನಿಮಾ, ಸುಳ್ಯದ ಸಂತೋಷ್, ಬೆಳ್ತಂಗಡಿಯ ಭಾರತ್ ಸಿನಿಮಾ ಸಹಿತ ಮಂಗಳೂರು, ಉಡುಪಿ, ಮಣಿಪಾಲ, ಪಡುಬಿದ್ರೆ, ಸುರತ್ಕಲ್, ಮೂಡಬಿದ್ರೆ, ಕಾರ್ಕಳದಲ್ಲಿ ಸಿನಿಮಾ ತೆರೆ ಕಾಣಲಿದೆ. ಮೇ 26ರಂದು ಬೆಳಿಗ್ಗೆ ಗಂಟೆ 10.50ಕ್ಕೆ ಪುತ್ತೂರಿನ ಜಿ.ಎಲ್.ಮಾಲ್‌ನಲ್ಲಿರುವ ಭಾರತ್ ಸಿನಿಮಾದಲ್ಲಿ ಬಿಡುಗಡೆ ಸಮಾರಂಭ ನಡೆಯಲಿದೆ. ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಮತ್ತು ಜಿ.ಎಲ್.ಮಾಲ್‌ನ ಸುದನ್ವ ಆಚಾರ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 11 ಗಂಟೆ ಸಿನಿಮಾ ಪ್ರದರ್ಶನ ಆರಂಭಗೊಳ್ಳಲಿದೆ ಎಂದು ಅವರು ಹೇಳಿದರು.


ಹಾಸ್ಯ, ಕೌಟುಂಬಿಕ ಕತೆ:
ಸಿನಿಮಾ ಹಾಸ್ಯಭರಿತ ಮತ್ತು ಕೌಟುಂಬಿಕ ಕತೆಯ ಎಳೆಯನ್ನು ಹೊಂದಿದೆ. ಪಿರ್ಕಿಲು ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರ ಸೃಷ್ಟಿಸುತ್ತಾರೆ ಎಂಬುದನ್ನು ಹಾಸ್ಯಭರಿತವಾಗಿ ಕಟ್ಟಿಕೊಟ್ಟಿದ್ದೇವೆ. ಕುಟುಂಬದವರಿಗೆಲ್ಲ ಮನರಂಜನೆ ಒದಗಿಸುವ ಚಿತ್ರವನ್ನು ಎಲ್ಲರು ಇಷ್ಟಪಡುವ ಭರವಸೆ ಇದೆ ಎಂದು ಹೆಚ್.ಡಿ.ಆರ್ಯ ತಿಳಿಸಿದರು.


ಪುತ್ತೂರು, ಆಸುಪಾಸಿನ ಪರಿಸರದಲ್ಲಿ ಚಿತ್ರೀಕರಣ:
ಸಿನಿಮಾವನ್ನು ಪುತ್ತೂರು, ಕುರಿಯ, ಉಪ್ಪಿನಂಗಡಿ, ಮಂಗಳೂರು ಕಡೆಗಳಲ್ಲಿ 29 ದಿನ ಚಿತ್ರೀಕರಣ ಮಾಡಲಾಗಿದೆ. ನಾಯಕರಾಗಿ ವರ್ಧನ್ ಮತ್ತು ಪುತ್ತೂರು ಕೈಕಾರ ಸುದೇಶ್ ಮತ್ತು ನಾಯಕಿಯಾಗಿ ಸುಲೋಮಿ ಡಿ ಸೋಜ ಮತ್ತು ಲತಾ ಅಭಿನಯಿಸಿದ್ದಾರೆ. ತಾರಾ ಬಳಗದಲ್ಲಿ ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ, ಸುಮಿತ್ರ ರೈ, ಅಮಿತಾ, ನವೀನ್ ಬೋಂದೇಲ್, ಅರ್ಪಣ್,ಅನಿಲ್ ರೈ, ರಂಜಿತ್ ರೈ, ತಿಮ್ಮಪ್ಪ ಕುಲಾಲ್, ಪ್ರಭಾಕರ ಶೆಟ್ಟಿ, ಮೋಹನ್, ಸೋನಿ ಅಭಿನಯಿಸಿದ್ದಾರೆ. ಎ.ಆರ್ ಕೃಷ್ಣ ಮತ್ತು ಅಭಿಷೇಕ್ ರಾವ್ ಅವರು ಸಂಕಲನ, ವಿ ಮನೋಹರ್ ಅವರು ಸಂಗೀತ, ಶ್ರೀಧರ್ ಕರ್ಕೆರ ಸಾಹಿತ್ಯ, ಎ..ಆರ್.ಕೃಷ್ಣ ಛಾಯಾಗ್ರಹಣದಲ್ಲಿ, ತುಳು ಸಂಭಾಷಣೆಯ ಸಹಾಯ ಮತ್ತು ತರ್ಜಿಮೆಯನ್ನು ಬಬಿತ ಮಾಡುವ ಮೂಲಕ ಸಹಕರಿಸಿದ್ದಾರೆ.


ತುಳು ಸಿನಿಮಾನ್ ಗೆಂದದು ಕೊರೊಡು:
ನಾಯಕ ನಟ ಕೈಕಾರದ ಸುರ್ದೇಶ್ ಅವರು ತುಳುವಿನಲ್ಲೇ ಮಾತನಾಡಿ ಸಿನಿಮಾದಲ್ಲಿ ಮೊದಲ ಪಾತ್ರ ಮಾಡುತ್ತಿದ್ದೇನೆ. 2ನೇ ನಾಯಕ ನಟನಾಗಿದ್ದೇನೆ. ತುಳು ಸಿನಿಮಾನ್ ಗೆಂದದು ಕೊರೊಡು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಸತೀಶ್ ಪೆರ್ನೆ ಮತ್ತು ಶಿವಪ್ರಸಾದ್ ಇಜ್ಜಾವು, ನಾಯಕ ನಟಿ ಲತಾ, ನಟ ಅನಿಲ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here