ಉದ್ಯಮಿ ಹಸೈನಾರ್ ಹಾಜಿ ಕತ್ತಾರ್‌ರಿಂದ ಶಾಸಕ ಅಶೋಕ್ ರೈಗೆ ಸನ್ಮಾನ

0

ಪುತ್ತೂರು: ಪುತ್ತೂರು ಶಾಸಕರಾಗಿ ಆಯ್ಕೆಗೊಂಡ ಅಶೋಕ್ ರೈರವರ ಒಡನಾಡಿ, ಆತ್ಮೀಯರಾದ ಉದ್ಯಮಿ ಹಸೈನಾರ್ ಹಾಜಿ ಕತ್ತಾರ್‌ರವರು ಕೋಡಿಂಬಾಡಿಯಲ್ಲಿ ಅಶೋಕ್ ಕುಮಾರ್ ರೈರವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಪುತ್ತೂರು ಪಡೀಲ್ ನಿವಾಸಿಯಾದ ಹಸೈನಾರ್ ಹಾಜಿರವರು ಕತ್ತಾರ್‌ನಲ್ಲಿ ಉದ್ಯಮಿಯಾಗಿದ್ದು ಅಶೋಕ್ ಕುಮಾರ್ ರೈರವರ ಒಡನಾಡಿಯಾಗಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಸಹಿತ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here