ಪುತ್ತೂರು ದೇವಾಂಗ ಸೇವಾ ಸಮಾಜದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

0

ಪುತ್ತೂರು: ದೇವಾಂಗ ಸೇವಾ ಸಮಾಜ ಪುತ್ತೂರು ಇದರ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಮೆ.24ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಎಂ ಎನ್ ಚೆಟ್ಟಿಯಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ನಗರಸಭೆ ಮುನ್ಸಿಪಲ್‌ ಕಮಿಷನರ್ ಮಧು ಎಸ್ ಮನೋಹರ್ ಹಾಗೂ ನರಿಮೊಗ್ರು ಗ್ರಾಮ ಪಂಚಾಯತ್ ನ ರವಿಚಂದ್ರ, ನೂತನ ಅಧ್ಯಕ್ಷ ಕೆ.ದಿವಾಕರ ಶೆಟ್ಟಿ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳು, ಗಣ್ಯರು ಸೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳು ಮಾತನಾಡಿ ಸಮಾಜಕ್ಕೆ ನಮ್ಮಿಂದಾಗುವ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು. ಅಧ್ಯಕ್ಷ ಎಂ ಎನ್ ಚೆಟ್ಟಿಯಾರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಮ್ಮ ಸಂಘಟನೆ ಮುಂದೆ ಉತ್ತಮವಾಗಿ ಬೆಳೆಯಬೇಕು ಎಂದು ಹಾರೈಸಿದರು.

ಪ್ರಾಸ್ತಾವಿಕ ಮತ್ತು ವರದಿಯನ್ನು ಸುನೀತಾ ರವೀಂದ್ರರವರು ನಡೆಸಿಕೊಟ್ಟರು. ಬಹುಮಾನ ವಿತರಣೆ, ಕಲಿಕೆಗೆ ಪ್ರೋತ್ಸಾಹ ಧನ, ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಎಸ್ ಎಸ್ ಎಲ್ ಸಿ ಟಾಪರ್ಸ್ ಗಳಾದ ಸುದಾನ ವಸತಿಯುತ ಶಾಲೆಯ 2021-22ನೇ ಸಾಲಿನಲ್ಲಿ 99.68% ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನಗಳಿಸಿದ ತನ್ವಿತಾ ಎಂ ಶೆಟ್ಟಿ ಮತ್ತು 96% ಅಂಕಗಳಿಸಿದ ಆದಿತ್ಯ ವಿ ಮುರ ಇವರನ್ನು ಮುಖ್ಯ ಅತಿಥಿ ಮಧು ಎಸ್ ಮನೋಹರ್ ಎಂ.ಟೆಕ್ ಗೌರವಿಸಿದರು.

ನಂದಕುಮಾರ್ ಬೆಂಗಳೂರು, ಎಂ ಸಂಜೀವ ಶೆಟ್ಟಿ ಮತ್ತು ಮಕ್ಕಳು, ಮುರಳೀಧರ್ ಶೆಟ್ಟಿ, ಸತೀಶ್ ಮಾಡಾವು ಉಪಸ್ಥಿತರಿದ್ದರು.

ನಿರ್ಮಲಾ ಪ್ರಾರ್ಥಿಸಿ, ವಿಧ್ಯಾ ಗಿರಿಧರ್ ಅವರು ಸ್ವಾಗತಿಸಿದರು. ತನ್ವಿತಾ ಎಂ ಶೆಟ್ಟಿ ವಂದಿಸಿ, ಪ್ರಭಾ ಮುರ ನಿರೂಪಸಿ,ಸುಮಿತ್ರಾ,ಹೇಮಾವತಿ, ಶಿಥಿಲ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here