ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ಮನೆ ನಿರ್ಮಾಣಕ್ಕೆ ಸಿಮೆಂಟ್ ಕೊಡುಗೆ

0

ಪುತ್ತೂರು: ಸರಕಾರದ ಅನುದಾನ ಹಾಗೂ ಊರ ಪರವೂರ ದಾನಿಗಳ ನೆರವಿನೊಂದಿಗೆ ನಿರ್ಮಾಣಗೊಳ್ಳುತ್ತಿರುವ ಅರಿಯಡ್ಕ ಗ್ರಾಮದ ಬಡಕುಟುಂಬದ ಭಾಗೀರಥಿಯವರ ಮನೆಯ ಮೇಲ್ಛಾವಣಿ ನಿರ್ಮಾಣಕ್ಕೆ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ಸಿಮೆಂಟ್ ಅನ್ನು ಕೊಡುಗೆಯಾಗಿ ನೀಡಲಾಯಿತು.

ಸಂಘಟನೆಯ ಗೌರವ ಅಧ್ಯಕ್ಷರಾಗಿರುವ ಓಲೆಮುಂಡೋವು ಮೋಹನ್ ರೈಯವರು 3 ಲೋಡ್ ಕೆಂಪು ಕಲ್ಲು, ಶಾಸಕ ಅಶೋಕ್ ಕುಮಾರ್‌ರವರು 1 ಲೋಡ್ ಕೆಂಪು ಕಲ್ಲು ಕೊಡುಗೆಯಾಗಿ ನೀಡಿದ್ದಾರೆ. ಇದಲ್ಲದೆ ಸಂಘಟನೆಯ ಅಭಿಮಾನಿಗಳು ಧನ ಸಹಾಯ ಮಾಡಿದ್ದು ಸಂಘಟನೆಯ ಸದಸ್ಯ, ಕುಂಬ್ರ ತನ್ವಿ ಇಲೆಕ್ಟ್ರೀಕಲ್ಸ್‌ನ ಮಾಲಕ ಸಂದೇಶ್ ಕುಂಬ್ರರವರು ಮನೆಗೆ ಸಂಪೂರ್ಣ ವಿದ್ಯುತ್ ವಯರಿಂಗ್ ಅನ್ನು ಉಚಿತವಾಗಿ ಮಾಡಿಕೊಡುವ ಭರವಸೆ ನೀಡಿದ್ದಾರೆ. ಸಂಘಟನೆಯು ಕಳೆದ ಹಲವು ವರ್ಷಗಳಿಂದ ವಿವಿಧ ರೀತಿಯಲ್ಲಿ ಸಮಾಜದ ಬಡ ವರ್ಗದ ಜನರಿಗೆ ಸಹಾಯ ಮಾಡುತ್ತಾ ಬಂದಿದ್ದು ಕೊಂರ್ಬಡ್ಕದ ಲೋಕಾವತಿ ಎಂಬವರು ಅನಾರೋಗ್ಯದಲ್ಲಿದ್ದ ಸಂದರ್ಭ ಚಿಕಿತ್ಸೆಗೆ ಸಂಘಟನೆಯ ವತಿಯಿಂದ ರೂ.17 ಸಾವಿರದ ಚೆಕ್ ನೀಡಲಾಗಿದೆ. ಪಯಂದೂರು ಶಿವಾಜಿ ನವೋದಯ ಸ್ವಸಹಾಯ ಸಂಘ ಇದರ ಸಭಾ ಭವನಕ್ಕೆ ಸಂಘಟನೆಯ ವತಿಯಿಂದ ಉಚಿತ ಪೈಂಟ್ ಮತ್ತು ಪೈಂಟ್ ಕೊಡುವ ಕಾರ್ಯವನ್ನು ಉಚಿತವಾಗಿ ಮಾಡಿಕೊಡಲಾಗಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here