ಭಾರತ್ ಸಿನೆಮಾದಲ್ಲಿ ಪಿರ್ಕಿಲು ತುಳು ಸಿನಿಮಾ ತೆರೆಗೆ

0

ಪುತ್ತೂರು: ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಪೆರ್ನೆ, ಶಿವಪ್ರಸಾದ್ ಇಜ್ಜಾವು ನಿರ್ಮಾಣ, ನಿರ್ದೇಶನದಲ್ಲಿ ತಯಾರಾದ ಪಿರ್ಕಿಲು ತುಳು ಸಿನಿಮಾ ಮೇ 26 ರಂದು ಪುತ್ತೂರಿನ ಜಿ.ಎಲ್ ವನ್ ಮಾಲ್ ನಲ್ಲಿರುವ ಭಾರತ್ ಸಿನೇಮಾದಲ್ಲಿ ತೆರೆ ಕಂಡಿದೆ.


ನೂತನ ಚಲನಚಿತ್ರವನ್ನು ಕಟ್ಟಡದ ಮ್ಹಾಲಕ ಸುಧನ್ವ ಆಚಾರ್ಯ ಹಾಗೂ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ದೀಪ ಬೆಳಗಿಸಿ, ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸುಧನ್ವ ಆಚಾರ್ಯ , ಮಾಲ್‌ನಲ್ಲಿ ಪಿರ್ಕಿಲು ಎಂಬ ತುಳು ಚಲನಚಿತ್ರವು ಪ್ರಥಮ ಬಾರಿಗೆ ಬಿಡುಗಡೆಗೊಂಡಿದೆ. ಈ ಚಲನ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಲಿ ಎಂದು ಆಶಿಸಿದರು.


ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ತುಳು ಚಲನ ಚಿತ್ರದ ಮೂಲಕ ತುಳುನಾಡಿನ ಸಂಸ್ಕಾರ, ಸಂಸ್ಕೃತಿಗಳ ಗೌರವ ಕಾಪಾಡಲು ಪೂರಕವಾಗಿದೆ. ಶಿವಪ್ರಸಾದ್ ಇಜ್ಜಾವು ಒಂದು ದೊಡ್ಡ ಸಾಹಸಕ್ಕೆ ಹೊರಟ್ಟಿದ್ದು ಯಶ್ವಿಯಾಗಲಿ. ಚಲನ ಚಿತ್ರವನ್ನು ಪ್ರತಿಯೊಬ್ಬರೂ ವೀಕ್ಷಣೆ ಮಾಡಿ ಅವರನ್ನು ಪ್ರೋತ್ಸಾಹಿಸಬೇಕು ಎಂದರು.


ಜಿಲ್ಲೆಯಾದ್ಯಂತ ಏಕಕಾಲದಲ್ಲಿ ತೆರೆ ಕಂಡಿರುವ ಚಿತ್ರದಲ್ಲಿ ತಾರಾ ಬಳಗದಲ್ಲಿ ಖ್ಯಾತ ನಾಮರಾದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ನವರಸ ರಾಜ ಭೋಜರಾಜ ವಾಮಂಜೂರು, ದೀಪಕ್ ರೈ ಪಾಣಾ ಜೆ, ರವಿ ರಾಮಕುಂಜ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕ ನಟರಾಗಿ ವರ್ಧನ್ ಮತ್ತು ಸುದೇಶ್, ನಾಯ ಕಿಯಾಗಿ ಸಲೋಮಿ ಡಿಸೋಜ, ಲತಾ ಅಭಿನಯಿಸಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here