ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪತ್ತನಾಜೆ ಉತ್ಸವ

0

ಆಲಂಕಾರು: ಸೀಮಾ ದೇವಸ್ಥಾನವಾದ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪತ್ತನಾಜೆ ಪ್ರಯುಕ್ತ ಬೆಳಿಗ್ಗೆ ಅರಸು ಉಳ್ಳಾಯ,ಧೂಮವತೀ,ಬಂಟ,ರಕ್ತೇಶ್ವರೀ ಕೊಡಮಣಿತ್ತಾಯ,ಮಹಿಷಂತ್ತಾಯ ಹಾಗು ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆದು ಮದ್ಯಾಹ್ನ ದುರ್ಗಾಪರಮೇಶ್ವರಿ , ಮಹಾಗಣಪತಿ , ಗಂಗಾದೇವಿಗೆ ಮಹಾಪೂಜೆ, ರುದ್ರಚಾಮಂಡಿ ದೈವಕ್ಕೆ ತಂಬಿಲ ಸೇವೆ ನಡೆದು ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಶ್ರೀ ದೇವಿಗೆ ದೊಡ್ಡರಂಗಪೂಜೆ ನಡೆದು ಬಲಿಹೊರಟು ಉತ್ಸವ,ಮಹಾಪೂಜೆ ಪ್ರಸಾದ ವಿತರಣೆ ನಡೆದು ಸಂತರ್ಪಣೆ ನಡೆಯಿತು.ಈ ಸಂಧರ್ಭ ದಲ್ಲಿ ವ್ಯವಸ್ಥಾಪನ ಸಮಿತಿ ಅದ್ಯಕ್ಷರು ಮತ್ತು ವ್ಯವಸ್ಥಾಪನ ಸಮಿತಿಯ ಸದಸ್ಯರು,ಸಿಬ್ಬಂದಿ ವರ್ಗ ದವರು ಹಾಗು ಭಕ್ತಾಧಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here