ಪುತ್ತೂರು: ಹತ್ತು ಹಲವು ಸಮಾಜಮುಖಿ ಕಾರ್ಯಚಟುವಟಿಕೆಗಳ ಮೂಲಕ ಜನಮನ್ನಣೆಗಳಿಸಿರುವ ರೋಟರಿ ಕ್ಲಬ್ ಪುತ್ತೂರು ಸಿಟಿ ಇದೀಗ ತನ್ನ ಚಾರಿಟೇಬಲ್ ಟ್ರಸ್ಟ್ ನ ಪ್ರಾಯೋಜಕತ್ವದಲ್ಲಿ ಎಲ್.ಕೆ.ಜಿ., ಯು.ಕೆ.ಜಿ., ಆಂಗ್ಲ ಮಾಧ್ಯಮ ಶಾಲೆಯೊಂದನ್ನು ಹುಟ್ಟು ಹಾಕಿ ಆ ಮೂಲಕ ಶಿಕ್ಷಣಿಕವಾಗಿಯೂ ತೊಡಗಿಕೊಳ್ಳುವತ್ತ ಮಹತ್ತರದ ಹೆಜ್ಜೆಯನ್ನಿಟ್ಟಿದೆ.
ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ ಟ್ರಸ್ಟ್ ಇದರ ಪ್ರಾಯೋಜಕತ್ವದಲ್ಲಿ ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಎಲ್.ಕೆ.ಜಿ., ಯು.ಕೆ.ಜಿ., ಆಂಗ್ಲ ಮಾಧ್ಯಮ ಶಾಲೆಯನ್ನು ನೂತನ ಶೈಕ್ಷಣಿಕ ವರ್ಷದಿಂದ ಪ್ರಾರಂಭಗೊಳಿಸುವ ಯೋಜನೆಯನ್ನು ಹಾಕಿಕೊಂಡು ಕಾರ್ಯತತ್ಪರವಾಗಿದೆ.
ರೋಟರಿ ಕ್ಲಬ್ ಪುತ್ತೂರು ಸಿಟಿ ಸಂಸ್ಥೆಯು 2003ರಲ್ಲಿ ಪ್ರಾರಂಭಗೊಂಡು ಪುತ್ತೂರಿನಲ್ಲಿ ಹತ್ತು ಹಲವು ಸಮಾಜ ಮುಖಿ ಕಾರ್ಯಚಟುವಟಿಕೆಗಳನ್ನು ಮಾಡುವ ಮೂಲಕ ಚಿರಪರಿಚಿತವಾಗಿದೆ.
ನಿತ್ಯ ನಿರಂತರವಾಗಿ ನೊಂದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾ ಸದಾ ಬೆನ್ನೆಲುಬಾಗಿ ನಿಲ್ಲುವ ಮೂಲಕ ರೋಟರಿ ಕ್ಲಬ್ ಪುತ್ತೂರು ಸಿಟಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದುನಿಂತಿದೆ.
ಸಂಸ್ಥೆಯು 20 ವರ್ಷಗಳ ಸಾರ್ಥಕ ಸೇವೆಯನ್ನು ನೀಡುತ್ತಾ ಬಂದಿರುವ ನಿಟ್ಟಿನಲ್ಲಿ ಪ್ರಸ್ತುತ ರೋಟರಿ ವರ್ಷದಲ್ಲಿ ಪ್ರಥಮವಾಗಿ ಶೈಕ್ಷಣಿಕ ಸೇವೆಯನ್ನು ನೀಡುವ ಉದ್ದೇಶದಿಂದ ಪುತ್ತೂರು ನೆಲ್ಲಿಕಟ್ಟೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಗಣದಲ್ಲಿ ಎಲ್.ಕೆ.ಜಿ., ಯು.ಕೆ.ಜಿ., ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಲು ಮುಂದಾಗಿದೆ.
ಮೂಲಭೂತ ಸೌಕರ್ಯವನ್ನು ಹೊಂದಿ ಕೈಗೆಟಕುವ ಶುಲ್ಕದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಇರಾದೆ ಸಂಸ್ಥೆಯದ್ದಾಗಿದೆ. ಇದೀಗಾಗಲೇ ದಾಖಲಾತಿ ಆರಂಭಗೊಂಡಿದ್ದು ಮಕ್ಕಳ ಪೋಷಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದ್ದು, ಜೂ.1 ರಂದು ಶಾಲಾ ಪ್ರವೇಶೋತ್ಸವ ನಡೆಯಲಿದೆ.
ಬಡವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ
ರೋಟರಿ ಕ್ಲಬ್ ಪುತ್ತೂರು ಸಿಟಿ ಸಂಸ್ಥೆಯು ಹತ್ತು ಹಲವು ಸಮಾಜಿ ಮುಖಿ ಕಾರ್ಯಗಳ ಮೂಲಕ ಜನಮನ್ನಣೆ ಪಡೆದ ಸಂಸ್ಥೆಯಾಗಿದೆ. ಬಡವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕೆನ್ನುವ ಉದ್ದೇಶದಿಂದ ಪ್ರಸ್ತುತ ವರ್ಷದಿಂದ ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಎಲ್.ಕೆ.ಜಿ., ಯು.ಕೆ.ಜಿ., ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಿದ್ದೇವೆ. ನಮ್ಮ ಈ ಕನಸನ್ನು ನನಸು ಮಾಡುವಲ್ಲಿ ಹಲವರು ಸಲಹೆ ಸಹಕಾರವನ್ನು ನೀಡಿ ನಮ್ಮನ್ನು ಹರಸಿದ್ದಾರೆ. ಅವರಿಗೆ ನಾವು ಅಭಾರಿಯಾಗಿದ್ದೇವೆ. ನಮ್ಮ ಈ ಒಂದು ಯೋಜನೆಯನ್ನು ಸಾಕಾರ ಮಾಡುವಲ್ಲಿ ಪುತ್ತೂರಿನ ಜನತೆಯ ಸಹಕಾರ ಅತ್ಯಗತ್ಯವಿದೆ.