ಪುತ್ತೂರು:ಪರ್ಲಡ್ಕ ನಿವಾಸಿಯಾಗಿದ್ದು ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದ ಮೊಹಮ್ಮದ್ ಹಾರೀಸ್(43ವ)ರವರು ಮೇ 27ರಂದು ರಾತ್ರಿ ಸೌದಿ ಅರೇಬಿಯಾ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ, ದರ್ಬೆ ನಿವಾಸಿಯಾಗಿದ್ದ ದಿ.ಮೊಹಮ್ಮದ್ ಹಟ್ಟಾ ಅವರ ಸಹೋದರ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಪರ್ಲಡ್ಕದ ಅಬ್ದುಲ್ಲಾ ಎಂಬವರ ಪುತ್ರ ಮೊಹಮ್ಮದ್ ಹಾರೀಸ್ ಅವರು ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಸ್ವಂತ ಉದ್ಯಮ ಮಾಡಿಕೊಂಡು ಪತ್ನಿ ಮಕ್ಕಳು ಸಮೇತರಾಗಿ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ವಾಸ್ತವ್ಯ ಹೊಂದಿದ್ದರು.

ಮೇ 27ರಂದು ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತದಿಂದ ನಿಧನರಾದರು.ಮೃತರು ತಂದೆ ಅಬ್ದಲ್ಲಾ, ತಾಯಿ, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಓರ್ವ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here