ಪೆರಾಬೆ-ಬೇಸಿಗೆ ಶಿಬಿರದ ಸಮಾರೋಪ

0

ಪೆರಾಬೆ: ಪೆರಾಬೆ ಗ್ರಾಮ ಪಂಚಾಯತಿ ಹಾಗೂ ಗ್ರಂಥಾಲಯದ ಆಶ್ರಯದಲ್ಲಿ ಮೇ.19ರಿಂದ 26ರ ತನಕ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ 27ರಂದು ಕುಂತೂರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.


ಪೆರಾಬೆ ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ್ ರೈ ಪರಾರಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಶಾಲಿನಿ ಕೆ.ಬಿ.ಅವರು ಮಾತನಾಡಿ, ಮಕ್ಕಳು ಗ್ರಾ.ಪಂ.ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಸದುಪಯೋಗಪಡಿಸಿಕೊಂಡು ಜ್ಞಾನವನ್ನು ಹೆಚ್ಚಿಸಬೇಕೆಂದು ಹೇಳಿದರು. ಪೆರಾಬೆ ಸರಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕಿ ಹೇಮಲತಾ ಅವರು ಮಾತನಾಡಿ, ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಉತ್ತಮ ಜ್ಞಾನವನ್ನು ಸಂಪಾದಿಸಬೇಕು. ಮೊಬೈಲ್ ಬಳಕೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ ಓದಿನತ್ತ ಗಮನಹರಿಸಬೇಕೆಂದು ಹೇಳಿದರು.8 ದಿನ ಗ್ರಾಮೀಣ ಮಕ್ಕಳ ಶಿಬಿರ ನಡೆಸಿಕೊಟ್ಟ ಗ್ರಂಥಾಲಯ ಮೇಲ್ವಿಚಾರಕ ಕೆಲಸವನ್ನು ಶ್ಲಾಘಿಸಿದರು. ಇಡಾಲ ಶಾಲೆಯ ಮುಖ್ಯೋಪಾಧ್ಯಾಯ ಮಹೇಶ್ ಶುಭಹಾರೈಸಿದರು. ಮಾರ್ ಇವಾನಿಯೋಸ್ ಶಾಲೆಯ ಶಿಕ್ಷಕ ಸಚಿನ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಭಾಗವಹಿಸಿದ ಕುಂತೂರು ಶಾಲಾ ವಿದ್ಯಾರ್ಥಿನಿ ಅಸ್ನ, ಕುಂತೂರು ಮಾರ್ ಇವಾನಿಯೋಸ್ ಶಾಲೆಯ ವಿದ್ಯಾರ್ಥಿ ನೇಹಾಲ್, ಕೊಡುಗು ಜಿಲ್ಲೆಯ ಮಡಿಕೇರಿ ಶಾಲೆಯ ಮಹಮ್ಮದ್ ಅಯಾನ್, ಸಾಝಿಲ್ ಅನಿಸಿಕೆ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಕಥೆ ಸ್ಪರ್ಧೆ, ಜನಪದ ಗೀತೆ, ಪತ್ರಿಕೆ ಓದುವುದು, ಚೆಸ್‌ಆಟ, ಕೇರಂ ಆಟ, ಅಭಿನಯಗೀತೆ, ಡ್ರಾಯಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಪೆರಾಬೆ ಗ್ರಾ.ಪಂ.ವತಿಯಿಂದ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಪ್ರಶಂಸನಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಗ್ರಾ.ಪಂ.ಉಪಾಧ್ಯಕ್ಷೆ ಸಂಧ್ಯಾ, ಸದಸ್ಯರಾದ ಚಂದ್ರಶೇಖರ ರೈ, ಸದಾನಂದ, ಕುಮಾರ, ಸುಶೀಲ, ಲೀಲಾವತಿ, ಮೇನ್ಸಿ ಸಾಜನ್, ವಿದ್ಯಾರ್ಥಿಗಳ ಪೋಷಕರಾದ ನೌಶಾದ್, ಶಶಿಕಲಾ, ಪ್ರತಿಮಾ, ಜಮೀಳಾ ಸಭೆಯಲ್ಲಿ ಉಪಸ್ಥಿತರಿದ್ದರು. ಕುಂತೂರು ಸರಕಾರಿ ಉ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ರಮೇಶ್, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಸಹಕರಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ವಂದಿಸಿದರು.

LEAVE A REPLY

Please enter your comment!
Please enter your name here