ನೂತನ ಸಂಸತ್‌ ಭವನ ಉದ್ಘಾಟನೆ-ಸೆಂಗೋಲ್‌ ಪ್ರತಿಷ್ಠಾಪನೆ

0

ಪುತ್ತೂರು: ನೂತನ ಸಂಸತ್‌ ಕಟ್ಟಡವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಪೂಜಾ ವಿಧಿ ವಿಧಾನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಪೂಜಾ ಕಾರ್ಯಕ್ರಮದ ಬಳಿಕ ಪುರೋಹಿತರಿಂದ “ಸೆಂಗೋಲ್”‌ ಸ್ವೀಕರಿಸಿದ ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ ಲೋಕಸಭೆಗೆ ಪ್ರವೇಶಿದ ಪ್ರಧಾನಿ ಸ್ಪೀಕರ್‌ ಆಸನದ ಬಳಿ “ಸೆಂಗೋಲ್”‌ ಪ್ರತಿಷ್ಠಾಪಿಸಿದರು.

ಬಳಿಕ ಫಲಕ ಅನಾವರಣ ಮಾಡುವ ಮೂಲಕ ಹೊಸ ಸಂಸತ್‌ ಭವನವನ್ನು ಉದ್ಘಾಟಿಸಿದರು. ಸಂಸತ್‌ ಭವನ ಪ್ರವೇಶಿಸಿದ ಮೋದಿಯವರು ಮಹಾತ್ಮಾಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಹಿಂದೂ ಮುಸ್ಲಿಂ, ಕ್ರೈಸ್ತರಿಂದ ಸಂಸತ್ತಿನ ಲಾಬಿಯಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here