ಪುತ್ತೂರು: ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವಾರ್ಷಿಕ ಮಹಾಸಭೆ 2023 ಮೇ 26 ಶನಿವಾರ ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯಲ್ಲಿ ಸಮಸ್ತ ಮುಫತ್ತಿಶ್ ಅಬ್ದುಲ್ ರಶೀದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯಿತು. ಹಳೆಗೇಟು ಖತೀಬ್ ಉಸ್ಮಾನ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿನ್ನಿಕಲ್ ಖತೀಬ್ ಅಬ್ದುಲ್ ಹಮೀದ್ ಹನೀಫಿ ಕುಂಡಾಜೆ ಅವರಿಂದ ಖಿರಾಅತ್ ಪಠಣ ನಡೆಯಿತು.
ಸಮಸ್ತ ಮುದರ್ರಿಬ್ ತಾಜುದ್ದೀನ್ ದಾರಿಮಿ ಕುಂಬ್ರ 2023-24ನೇ ಸಾಲಿನ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಆದರ್ಶ ನಗರ ಸದರ್ ಉಸ್ತಾದ್ ಅಬ್ದುಲ್ ಅಝೀಝ್ ಫೈಝಿ ಕರಾಯ ವಾರ್ಷಿಕ ವರದಿ ಲೆಕ್ಕ ಪತ್ರ ಮಂಡಿಸಿದರು.
ಇದೇ ವೇಳೆ 2023-24ನೇ ಸಾಲಿನ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. K H ಮುಹಮ್ಮದ್ ಅಶ್ರಫ್ ಹನೀಫಿ ಕರಾಯ (ಉಪ್ಪಿನಂಗಡಿ ಮದ್ರಸ) ಇವರನ್ನು ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರಾಗಿ ಯೂಸುಫ್ ಮುಸ್ಲಿಯಾರ್ ಕರಾಯ (ಕೋಲ್ಪೆ ಮದ್ರಸ) ಮತ್ತು ಉಸ್ಮಾನ್ ದಾರಿಮಿ ಹಳೆಗೇಟು ಮದ್ರಸ ಇವರನ್ನು ಆಯ್ಕೆ ಮಾಡಲಾಯಿತು. ಪ್ರದಾನ ಕಾರ್ಯದರ್ಶಿಯಾಗಿ K M ಅಬ್ದುಲ್ ಜಬ್ಬಾರ್ ಅಸ್ಲಮಿ ಕರಾಯ (ಬಂಗೇರಕಟ್ಟೆ ಮದ್ರಸ), ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಫೈಝಿ ಕರಾಯ (ಆದರ್ಶ ನಗರ ಮದ್ರಸ) ಮತ್ತು ಅಬ್ದುಲ್ ಸಮದ್ ಫೈಝಿ ಆನೆಮಹಲ್ (ಬಂಗೇರಕಟ್ಟೆ ಮದ್ರಸ), ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಹಾಜಿ ಕೊಲ್ಲೆಜಾಲ್, IT ಕೋರ್ಡಿನೇಟರ್ ಯಾಗಿ ಅಬ್ದುರ್ರಝಾಕ್ ದಾರಿಮಿ ನೇರೆಂಕಿ (ಕರಾಯ ಮದ್ರಸ), ಪರೀಕ್ಷಾ ಬೋರ್ಡ್ ಮುಖ್ಯಸ್ಥರಾಗಿ ಆಗಿ ಝಕರಿಯಾ ಮುಸ್ಲಿಯಾರ್ ಆತೂರು (ಪವಿತ್ರ ನಗರ ಮದ್ರಸ), ಉಪ ಮುಖ್ಯಸ್ಥರಾಗಿ ಇಲ್ಯಾಸ್ ದಾರಿಮಿ ಅಂಡಕೇರಿ (ಕರಾಯ ಮದ್ರಸ), ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಪಾಲ್ (ಕೋಲ್ಪೆ ಮದ್ರಸ) ಇವರನ್ನು ಆಯ್ಕೆ ಮಾಡಲಾಯಿತು. ಇನ್ನುಳಿದಂತೆ SKSBV ಮುಖ್ಯಸ್ಥರಾಗಿ ಅಬ್ದುಲ್ ಹಮೀದ್ ಹನೀಫಿ ಕುಂಡಾಜೆ (ನಿನ್ನಿಕಲ್ ಮದ್ರಸ) ಮತ್ತು SKSBV ಸಂಚಾಲಕರಾಗಿ ಅಬ್ದುಲ್ ಸಮದ್ ಬಾಖವಿ ಸಕಲೇಶಪುರ (ಕೊಕ್ಕಡ ಮದ್ರಸ), ಕುರುನ್ನುಗಳ್ ಸಂಚಾಲಕರಾಗಿ ಹಂಝ ಮುಸ್ಲಿಯಾರ್ ಬಂಡಾಡಿ (ಉಪ್ಪಿನಂಗಡಿ ಮದ್ರಸ) ಹಾಗೂ ಎಲ್ಲಾ ಮದ್ರಸ ಸದರ್ ಉಸ್ತಾದರು ಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ ಕೊಳ್ಳೆಜಾಲ್, ಕಾರ್ಯದರ್ಶಿ ಯೂಸುಫ್ ಹಾಜಿ ಪೆದಮಲೆ,ಎಲ್ಲಾ ಮದ್ರಸಗಳ ಉಸ್ತಾದರುಗಳು ಭಾಗವಹಿಸಿದ್ದರು.