ನೆಲ್ಯಾಡಿ: ಜೇಸಿಐ ಕೊಕ್ಕಡ ಕಪಿಲಾ ಇದರ ಆತಿಥ್ಯದಲ್ಲಿ ಭಾರತೀಯ ಜೇಸಿ ಸಂಸ್ಥೆ ವಲಯ 15 ಇದರ ನೂತನ ಸಾಲಿನ ಮೂರನೇ ವಲಯಾಡಳಿತ ಮಂಡಳಿ ಸಭೆ ಕೊಕ್ಕಡ ಸಮೀಪದ ನಿಡ್ಲೆ ಆನಂದ ರೆಸಾರ್ಟ್‌ನಲ್ಲಿ ಮೇ.28ರಂದು ನಡೆಯಿತು.
ಜೇಸಿಐ ವಲಯ 15ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೂರ್ವ ವಲಯಾಧ್ಯಕ್ಷ ಸಂತೋಷ ಜಿ ಸಮಾಜದಲ್ಲಿ ಜೇಸಿ ಆಂದೋಲನವನ್ನು ಬಲಪಡಿಸಲು ಕರೆ ನೀಡಿದರು. ಮಧ್ಯಂತರ ಸಮಾವೇಶದ ಪೂರ್ವಭಾವಿಯಾಗಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ನಿಕಟಪೂರ್ವ ಅಧ್ಯಕ್ಷರಾದ ರಾಯನ್ ಉದಯ ಕ್ರಾಸ್ತಾ, ವಲಯ ಉಪಾಧ್ಯಕ್ಷರಾದ ದೇವರಾಜ್ ಕುದ್ಪಾಜೆ, ಅಜಿತ್ ರೈ, ಭರತ್ ಶೆಟ್ಟಿ, ಸುಧಾಕರ ಆಚಾರ್ಯ, ಅಭಿಲಾಶ್ ಬಿ.ವಿ, ಆಡಳಿತ ಮಂಡಳಿಯ ನಿರ್ದೇಶಕ ಪ್ರಶಾಂತ ಲಾಯಿಲ, ಅಭಿವೃದ್ಧಿ ವಿಭಾಗದ ಮರಿಯಪ್ಪ, ಕಾರ್ಯಕ್ರಮ ವಿಭಾಗದ ಅಕ್ಷತಾ ಗಿರೀಶ್, ತರಬೇತಿ ವಿಭಾಗದ ಪ್ರದೀಪ್ ಬಾಕಿಲ, ಯುವ ಜೇಸಿ ವಿಭಾಗದ ಸ್ವಾತಿ ಜೆ. ರೈ ಹಾಗೂ ವಿನೀತ್ ಶಗ್ರಿತ್ತಾಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವಿವಿಧ ವಿಭಾಗಗಳ ಮುಖ್ಯಸ್ಥರಾದ ಉದಕ ಪತ್ರಿಕೆ ಸಂಪಾದಕ ಮೋಹನ್ ಚಂದ್ರ, ನಿರ್ಮಲಾ ಜಯರಾಮ, ಸಂತೋಷ ಕುಮಾರ್ ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಸಭೆಯ ಆತಿಥ್ಯ ವಹಿಸಿದ ಕೊಕ್ಕಡ ಕಪಿಲಾ ಜೇಸಿ ಸದಸ್ಯರನ್ನು ಅಭಿನಂದಿಸಲಾಯಿತು. ಕೊಕ್ಕಡ ಜೇಸಿಐ ಅಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ ಸ್ವಾಗತಿಸಿದರು. ಯುವ ಜೇಸಿ ಶ್ರವಣ್‌ರವರು ಜೇಸಿ ವಾಣಿ ವಾಚಿಸಿದರು. ವಲಯದ ಕಾರ್ಯದರ್ಶಿ ಕಾಶೀನಾಥ್ ಗೋಗಟೆ ವಂದಿಸಿದರು.