ಪುತ್ತೂರು: ಕಳೆದ 11 ವರ್ಷಗಳಿಂದ ಬಿಸಿರೋಡ್ನಲ್ಲಿ ಸಿಎಲ್ ಕೋರ್ಟ್ ಮುಂಭಾಗ ಸ್ವಂತ ಕಟ್ಟಡದೊಂದಿಗೆ ಕೇಂದ್ರ ಕಛೇರಿ ಹೊಂದಿ ಕಾರ್ಯಾಚರಿಸುತ್ತಿರುವ ಸವಿತಾ ಸೌಹಾರ್ದ ಸಹಕಾರಿ ನಿಯಮಿತದ ಪುತ್ತೂರು ಶಾಖೆ ಮತ್ತು ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭ ಪುತ್ತೂರಿನ ಶಿವ ಆರ್ಕೆಡ್ನ ಒಂದನೇ ಮಹಡಿಯಲ್ಲಿ ಮೇ.30ರಂದು ಬೆಳಗ್ಗೆ 10ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಪುತ್ತೂರು ಶಾಖೆಯನ್ನು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಉದ್ಘಾಟಿಸಲಿದ್ದಾರೆ. ಮಾರಾಟ ಮಳಿಗೆಯನ್ನು ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಪುತ್ತೂರು ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಉದ್ಘಾಟಿಸಲಿದ್ದಾರೆ. ಸೌಹಾರ್ದ ಸಹಕಾರಿಯ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭಾಧ್ಯಕ್ಷ ಜೀವಂಧರ ಜೈನ್, ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿರಾವ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಜಿಲ್ಲಾ ಸಂಯೋಜಕ ವಿಜಯ್ ಬಿ.ಎಸ್, ಸವಿತಾ ಸಮಾಜ ದ.ಕ. ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಉಡುಪಿ ಅಧ್ಯಕ್ಷ ನವೀನ್ಚಂದ್ರ ಭಂಡಾರಿ, ಎಸ್ಸಿಡಿಸಿಸಿ ಬ್ಯಾಂಕ್ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ, ಪುತ್ತೂರು ತಾಲೂಕು ಸವಿತಾ ಸಮಾಜ ಅಧ್ಯಕ್ಷ ರಮೇಶ್ ಮುರ, ಪುತ್ತೂರು ತಾಲೂಕು ಭಂಡಾರಿ ಸಮಾಜ ಅಧ್ಯಕ್ಷ ಗಿರೀಶ್ ಕುಮಾರ್, ಶ್ರೀಮಾ ಪಾರ್ಲರ್ ಮಾಲಕಿ ಮಾಧವಿ ಮನೋಹರ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಹಕಾರಿಯಲ್ಲಿ ಉದ್ಯಮದ ಬೆಳವಣಿಗೆಗೆ ವಿವಿಧ ಸೌಲಭ್ಯಗಳಿದ್ದು, ನಗದು ರಹಿತ 1 ವರ್ಷ ನಿಬಡ್ಡಿ ಸಾಲ, ಖರೀದಿ ಸಾಲ, ಓವರ್ ಡ್ರಾಫ್ಟ್ ಸಾಲ ಸಹಿತ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡಲಾಗತ್ತಿದೆ ಎಂದು ಪ್ರಕಟಣೆ ತಿಳಿಸಿದೆ.