





ಪುತ್ತೂರು: ಸವಣೂರು ಸಮೀಪದ ಇಡ್ಯಾಡಿಯಲ್ಲಿ ಯೋಗೀಶ್‌ರವರ ನೂತನ ಮನೆ “ಮಧು ಶ್ರೀ” ನಿಲಯದ ಗೃಹಪ್ರವೇಶದ ಅಂಗವಾಗಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಮೇ.29ರಂದು”ಶರಘಾತ” ಪ್ರಸಂಗದ ತಾಳಮದ್ದಳೆ ನಡೆಯಿತು.



ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಆನಂದ ಸವಣೂರು, ತಾರಾನಾಥ ಸವಣೂರು, ಬಾಲಕೃಷ್ಣ ಬೊಮ್ಮಾರು, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀರಾಮ (ಕಿಶೋರಿ ದುಗ್ಗಪ್ಪ ನಡುಗಲ್ಲು), ವಾಲಿ ( ಶುಭಾ ಜೆ ಸಿ ಅಡಿಗ ), ಸುಗ್ರೀವ ( ಹರಿಣಾಕ್ಷಿ ಜೆ ಶೆಟ್ಟಿ ) ಸಹಕರಿಸಿದರು. ಆನಂದ ಸವಣೂರು ಸ್ವಾಗತಿಸಿ ಯೋಗೀಶ್ ಇಡ್ಯಾಡಿ ವಂದಿಸಿದರು.














