ಪುತ್ತೂರು: ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘ ಮಾಡಾವು ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶನ ಚುನಾವಣೆಯು ಸಂಘದ ಕಛೇರಿಯಲ್ಲಿ ಜೂ.11 ರಂದು ನಡೆಯಲಿದ್ದು ಆಕಾಂಕ್ಷೆಯುಳ್ಳ ಅಭ್ಯರ್ಥಿಗಳು ಮೇ.30 ರಿಂದ ನಾಮಪತ್ರ ಸಲ್ಲಿಸಬಬಹುದಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ಗಂಟೆಯವರೇಗೆ ನಾಮಪತ್ರವನ್ನು ರಿಟರ್ನಿಂಗ್ ಅಫೀಸರ್‌ಗೆ ಸಲ್ಲಿಸಬೇಕಾಗಿದೆ.
ಜೂ.3 ನಾಮಪತ್ರ ಸಲ್ಲಿಕೆಗೆ ಕೊನೇಯ ದಿನಾಂಕವಾಗಿದ್ದು, ಜೂ.4 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅದೇ ದಿನ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು, ಜೂ.೫ ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದ್ದು ಅದೇ ದಿನ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ನಡೆಯಲಿದೆ. ಜೂ.7 ರಂದು ಸಿಂಧುತ್ವ ಹೊಂದಿರುವ ಉಮೇದುವಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಜೂ.11 ರಂದು ಮತದಾನ ನಡೆಯಲಿದ್ದು ಅದೇ ದಿನ ಮತ ಎಣಿಕೆಯೂ ನಡೆಯಲಿದೆ. ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅದರಲ್ಲಿ ಸಾಮಾನ್ಯ 7, ಪ.ಜಾತಿ ಮೀಸಲು 1, ಪ.ಪಂಗಡ ಮೀಸಲು 1, ಹಿ.ವರ್ಗ ಎ ಮೀಸಲು 1, ಹಿ.ವರ್ಗ ಬಿ.ಮೀಸಲು 1, ಮಹಿಳಾ ಮೀಸಲು ಸ್ಥಾನ 2 ಇರಲಿದೆ ಎಂದು ರಿಟರ್ನಿಂಗ್ ಅಫೀಸರ್ ಶೋಭಾ ಎನ್.ಎಸ್.ರವರ ಪ್ರಕಟಣೆ ತಿಳಿಸಿದೆ.