ಕಡಬ: ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಯ ಶಿಕ್ಷಕರಿಗೆ ತರಬೇತಿ

0

ಕಡಬ: ಇಲ್ಲಿನ ಸೈಂಟ್ ಜೋಕಿಮ್ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ವಿವಿಧ ವಿಭಾಗಗಳ ಶಿಕ್ಷಕರಿಗೆ ಅಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರವು ಸೈಂಟ್ ಜೋಕಿಮ್ ಸಭಾಭವನದಲ್ಲಿ ಜರಗಿತು.

ವಿದ್ಯಾಸಂಸ್ಥೆಯ ನೂತನ ಸಂಚಾಲಕ ವಂ| ಪೌಲ್ ಪ್ರಕಾಶ್ ಡಿಸೋಜಾ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿ ಶಿಕ್ಷಕರಲ್ಲಿ ಆಸಕ್ತಿ, ಸಮರ್ಪಣಾ ಭಾವ ಹಾಗೂ ಶಿಸ್ತು ಮುಖ್ಯವಾದುದು. ಈ ಮೂರು ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಕೆಲಸ ಶಿಕ್ಷಕರಿಂದ ಆಗಬೇಕು ಎಂದರು. ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ| ಅಮಿತ್ ಪ್ರಕಾಶ್ ರೊಡ್ರಿಗಸ್, ಸೈಂಟ್ ಜೋಕಿಮ್ ಕಾಲೇಜಿನ ಪ್ರಾಂಶುಪಾಲ ಕಿರಣ್ ಕುಮಾರ್, ಸೈಂಟ್ ಜೋಕಿಮ್ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಲತಾ, ಸೈಂಟ್ ಜೋಕಿಮ್ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಹಿಲ್ಡಾ ರೊಡ್ರಿಗಸ್ ಉಪಸ್ಥಿತರಿದ್ದರು.

ವಿದ್ಯಾಸಂಸ್ಥೆಯ ನೂತನ ಸಂಚಾಲಕ ವಂ| ಪೌಲ್ ಪ್ರಕಾಶ್ ಡಿಸೋಜಾ ಅವರನ್ನು ವಿದ್ಯಾಸಂಸ್ಥೆಯ ವಿವಿಧ ವಿಭಾಗಗಳ ವತಿಯಿಂದ ಶಿಕ್ಷಕ ವೃಂದದವರು ಹಾಗೂ ಉಪನ್ಯಾಸಕರು ಸಸಿಗಳನ್ನು ನೀಡಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜರುಗಿದ ತರಬೇತಿ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ರಾಕಿ ಮತ್ತಾಯಿ ಆ್ಯಂಟನಿ ಅವರು ನಡೆಸಿಕೊಟ್ಟರು. ಶಿಕ್ಷಕಿ ಸಾರಾ ಎಲ್. ಡಿಸೋಜಾ ಸ್ವಾಗತಿಸಿ, ಲತಾ ವಂದಿಸಿದರು. ಲೋಲಾಕ್ಷಿ ನಿರೂಪಿಸಿ, ಭವಾನಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here