ವೀರಮಂಗಲ ಶಾಲೆಯ ಶಾಲಾ ಪ್ರಾರಂಭೋತ್ಸವ-ನೂತನ ಪೂರ್ವ ಪ್ರಾಥಮಿಕ ತರಗತಿ ಉದ್ಘಾಟನೆ

0

ಪುತ್ತೂರು: ಪಿಎಂ ಶ್ರೀ ಯೋಜನೆಯಡಿ ಆಯ್ಕೆಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿನ ನೂತನ ವಿದ್ಯಾರ್ಥಿಗಳು ತರಗತಿ ಪ್ರವೇಶಿಸುವ ಕಾರ್ಯಕ್ರಮ ಮೇ.31 ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ಅನುಪಮಾ ವಹಿಸಿದ್ದರು. 2023-24ನೇ ಸಾಲಿನ ನೂತನ ಶೈಕ್ಷಣಿಕ ವರ್ಷವನ್ನು ಗ್ರಾಮ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ಇವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ವೀರಮಂಗಲ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಅನೇಕ ಸಾಧನೆಯನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಾಲೆಯು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ಶ್ರೀಯುತರು ಬೋರ್ವೆಲ್ ನ್ನು ಪಂಚಾಯತ್ ನಿಂದ ಕೊಡಮಾಡಿದುದಕ್ಕಾಗಿ ಎಸ್ ಡಿ ಎಂ ಸಿ ವತಿಯಿಂದ ಸನ್ಮಾನಿಸಲಾಯಿತು. ಉಪಾಧ್ಯಕ್ಷ ಸುಧಾಕರ ಕುಲಾಲ್ ಇವರು ಮಾತನಾಡಿ ವೀರಮಂಗಲ ಶಾಲೆಯು ಶೈಕ್ಷಣಿಕ ವರ್ಷದಲ್ಲಿ ಪಿಎಂ ಶ್ರೀ ಶಾಲೆಯಾಗಿ ಆಯ್ಕೆಯಾದದ್ದು ನಮ್ಮೆಲ್ಲರ ಭಾಗ್ಯ ಮಕ್ಕಳ ಕಲಿಕೆ ಉತ್ತಮವಾಗಿರಲಿ ಎಂದು ಹಾರೈಸಿದರು.

ವೀರಮಂಗಲ ಶಾಲೆಯ ಶಾಲಾ ಪ್ರಾರಂಭೋತ್ಸವ ನೂತನ ಪೂರ್ವ ಪ್ರಾಥಮಿಕ ತರಗತಿ ಉದ್ಘಾಟನೆ
ವಿದ್ಯಾರ್ಥಿಗಳು ಈ ದೇಶದ ಭವಿಷ್ಯ ಅವರು 21ನೇ ಶತಮಾನಕ್ಕೆ ತೆರೆದುಕೊಳ್ಳಲು ಎಲ್.ಕೆ.ಜೆ ತರಗತಿಗಳು ಆರಂಭವಾದದ್ದು ಮಕ್ಕಳಿಗೆ ದೊರೆತ ದೊಡ್ಡ ಅವಕಾಶ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ವೇಗಸ್ ನುಡಿದರು.

ಸಿಆರ್‌ಪಿ ಪರಮೇಶ್ವರಿ ಇವರು ಮಾತನಾಡಿ, ಈ ವರ್ಷ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತಮವಾಗಿ ಮಾಡಲು ಯೋಜನೆ ಇದ್ದು, ಗುಣಮಟ್ಟ ಶಿಕ್ಷಣ ನೀಡುವ ವರ್ಷವಾಗಲಿ, ಎಲ್ಲಾ ಪೋಷಕರು ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಶಾಲೆಗೆ ಕಳುಹಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ ಎಂದು ವಿನಂತಿಸಿದರು. ವೇದಿಕೆಯಲ್ಲಿ ಗ್ರಾಮಪಂಚಾಯತ್ ಸದಸ್ಯೆ ಪದ್ಮಾವತಿ, ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ಎಲ್ ಕೆ ಜಿ ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್ ನೀಡಿದ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ವಿದ್ವಾನ್ ಗೋಪಾಲಕೃಷ್ಣ ಮತ್ತು ಕಾರ್ಯದರ್ಶಿ ಹರೀಶ್ ಆಚಾರ್ಯ ಇವರನ್ನು ಗೌರವಿಸಲಾಯಿತು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶೋಭಾ, ಶ್ರೀಲತಾ, ಹೇಮಾವತಿ, ಶರಣ್ಯ, ಗಾಯತ್ರಿ, ನಳಿನಿ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಶಿಕ್ಷಕಿ ಹರಿಣಾಕ್ಷಿ ವಂದಿಸಿದರು. ಅಡುಗೆ ಸಿಬ್ಬಂಧಿಗಳು ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here