ರಾಜಸ್ವ ವಸೂಲಾತಿಯಲ್ಲಿ ಪುತ್ತೂರು ಆರ್‌ಟಿಓ ಗುರಿ ಮೀರಿದ ಸಾಧನೆ

0

ಗುರಿ ₹ 59.73 ಕೋಟಿ

ಸಾಧನೆ ₹ 61.52 ಕೋಟಿ

₹ 1.79 ಕೋಟಿ ಕೋಟಿ ಹೆಚ್ಚುವರಿ ಸಂಗ್ರಹ

ಪುತ್ತೂರು:ಸಾರಿಗೆ ಇಲಾಖೆಯ 2022-23ನೇ ಸಾಲಿನಲ್ಲಿ ವಾರ್ಷಿಕ ರಾಜಸ್ವ ವಸೂಲಾತಿ ಸಂಗ್ರಹಣೆಯಲ್ಲಿ ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಗುರಿ ಮೀರಿದ ಸಾಧನೆ ಮಾಡಿದೆ. ಪುತ್ತೂರು, ಸುಳ್ಯ ಹಾಗೂ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕುಗಳ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ 2022-23ನೇ ಸಾಲಿನಲ್ಲಿ ಒಟ್ಟು ರೂ.59,73,74,004 ರಾಜಸ್ವ ವಸೂಲಾತಿ ಗುರಿ ನೀಡಲಾಗಿದ್ದು ರೂ.61,52,90,838 ರಾಜಸ್ವ ವಸೂಲಾತಿ ಮೂಲಕ ಗುರಿಮೀರಿದ ಸಾಧನೆ ಮಾಡಿದೆ. ಈ ಸಾಲಿನಲ್ಲಿ ನಿಗದಿ ಪಡಿಸಿದ ಗುರಿಗಿಂತ 1,79,16,834 ಹೆಚ್ಚುವರಿ ಸಂಗ್ರಹಣೆಯ ಸಾಧನೆ ಮಾಡಿದೆ.
ಈ ಹಿಂದೆ ಪುತ್ತೂರು ಆರ್‌ಟಿಒ ಕಚೇರಿಯು ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳ ವ್ಯಾಪ್ತಿಯನ್ನು ಹೊಂದಿತ್ತು.ಆ ಬಳಿಕ ಬೆಳ್ತಂಗಡಿ ತಾಲೂಕನ್ನು ಹೊಸದಾಗಿ ಸ್ಥಾಪನೆಯಾಗಿದ್ದ ಬಂಟ್ವಾಳ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗೆ ಸೇರಿಸಲಾಗಿದ್ದು ನೂತನ ಕಡಬ ತಾಲೂಕನ್ನು ಪುತ್ತೂರು ಆರ್‌ಟಿಒ ವ್ಯಾಪ್ತಿಗೆ ಸೇರಿಸಲಾಗಿದೆ.ಪ್ರಸ್ತುತ ಪುತ್ತೂರು,ಸುಳ್ಯ ಮತ್ತು ಕಡಬ ತಾಲೂಕು ಪುತ್ತೂರು ಆರ್‌ಟಿಒ ವ್ಯಾಪ್ತಿಯಲ್ಲಿದೆ.

ಆರ್ಥಿಕ ವರ್ಷದಲ್ಲಿ ಮಾಸಿಕವಾಗಿ ರೂ.4,97,81,167 ರಾಜಸ್ವ ವಸೂಲಾತಿ ಗುರಿ ನೀಡಲಾಗಿತ್ತು. ಏಪ್ರಿಲ್‌ನಲ್ಲಿ ರೂ.5,45,02,347, ಮೇ ತಿಂಗಳಲ್ಲಿ ರೂ.4,77,70,766 ಜೂನ್‌ನಲ್ಲಿ ರೂ.4,70,44,224, ಜುಲೈನಲ್ಲಿ 4,0308069, ಆಗಸ್ಟ್ನಲ್ಲಿ 4,20,27,029, ಸಪ್ಟೆಂಬರ್‌ನಲ್ಲಿ 4,96,29942, ಅಕ್ಟೋಬರ್‌ನಲ್ಲಿ 6,03,79,956, ನವಂಬರ್‌ನಲ್ಲಿ 5,86,49,557, ಡಿಸೆಂಬರ್‌ನಲ್ಲಿ 4,48,92,564, ಜನವರಿಯಲ್ಲಿ 6,24,92,840, ಫೆಬ್ರವರಿಯಲ್ಲಿ 4,84,11,361 ಹಾಗೂ ಮಾರ್ಚ್ ತಿಂಗಳಲ್ಲಿ ರೂ.5,91,82,183 ರಾಜಸ್ವ ವಸೂಲಾತಿ ಸಂಗ್ರಹವಾಗಿದೆ.ಈ ಪೈಕಿ ಏಪ್ರಿಲ್, ಅಕ್ಟೋಬರ್, ನವಂಬರ್, ಜನವರಿ ಹಾಗೂ ಮಾರ್ಚ್ ತಿಂಗಳಲ್ಲಿ ಸರಕಾರ ನೀಡಿದ ಗುರಿಗಿಂತ ಅಧಿಕ ತೆರಿಗೆ ಸಂಗ್ರಹಿಸಿದೆ.

2022-23ನೇ ಸಾಲಿನಲ್ಲಿ ಒಟ್ಟು 3569 ವಾಹನಗಳನ್ನು ತನಿಖೆ ಮಾಡಿದ್ದು ಇದರಲ್ಲಿ 537 ವಾಹನಗಳ ಮೇಲೆ ಪ್ರಕರಣ ದಾಖಲಿಸಿ, 1 ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.ಪ್ರಕರಣ ದಾಖಲಿಸಿದ ವಾಹನಗಳ ಪೈಕಿ ದಂಡ ಹಾಗೂ ತೆರಿಗೆ ಸೇರಿದಂತೆ ಒಟ್ಟು ರೂ.32,97,283 ಸಂಗ್ರಹವಾಗಿದೆ.

9759 ಹೊಸ ವಾಹನಗಳ ನೋಂದಣಿ: ಕಳೆದ ಆರ್ಥಿಕ ವರ್ಷದಲ್ಲಿ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಹೊಸದಾಗಿ ಒಟ್ಟು 9759 ವಾಹನಗಳು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನೋಂದಾವಣೆಗೊಂಡಿವೆ.6,614 51-300ಸಿಸಿ ಮೋಟಾರ್ ಸೈಕಲ್, 75 300ಸಿಸಿ ಮೇಲ್ಪಟ್ಟ ಮೋಟಾರು ಸೈಕಲ್, 1799 ಮೋಟಾರು ಕಾರು, 610 ಆಟೋ ರಿಕ್ಷಾ, 19 ಮೋಟಾರ್ ಕ್ಯಾಬ್, 11 ಪಬ್ಲಿಕ್ ಕ್ಯಾರಿರ‍್ಸ್, 3 ಪ್ರೈವೇಟ್ ಕ್ಯಾರಿರ‍್ಸ್, 7 ಟ್ರಾಕ್ರ‍್ಸ್, 2 ಟ್ರೇಲರ್, 175 ಟಿಪ್ಪರ್‌ಗಳು, 195 ಎಲ್‌ಪಿಜಿ ತ್ರಿ ವ್ಹೀಲರ್, 1 ಆಂಬ್ಯುಲೆನ್ಸ್, 229 ಎಲ್‌ಪಿಸಿ 4 ವ್ಹೀಲರ್, 12 ಮಲ್ಟಿಎಕ್ಸೆಲ್/ಆರ್ಟಿಕುಲೇಟೆಡ್, 3 ಜೇಸಿಬಿ ಹಾಗೂ 4 ಪಿಎಸ್‌ವಿ ವಾಹನಗಳು ನೊಂದಾವಣೆಗೊಂಡಿರುತ್ತದೆ ಎಂದು ಆರ್‌ಟಿಒ ಕಚೇರಿಯಿಂದ ಮಾಹಿತಿ ನೀಡಲಾಗಿದೆ.

79 ಲೈಸನ್ಸ್ ಅಮಾನತು
ಈ ಸಾಲಿನಲ್ಲಿ ಒಟ್ಟು 29 ಡ್ರಿಂಕ್ ಡ್ರೈವ್ ಪ್ರಕರಣ ದಾಖಲಿಸಿಕೊಂಡು 22 ಲೈಸನ್ಸ್ ಅಮಾನತು ಮಾಡಲಾಗಿದೆ. ಹೆಲ್ಮೆಟ್ ರಹಿತ ಬೈಕ್ ಸವಾರಿ, ಅಧಿಕ ವೇಗ ಸೇರಿದಂತೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 60 ಪ್ರಕರಣ ದಾಖಲಿಸಲಾಗಿದ್ದು 57 ಲೈಸನ್ಸ್ ಅಮಾನತು ಮಾಡಲಾಗಿದೆ.

LEAVE A REPLY

Please enter your comment!
Please enter your name here