ಜೂ.5: ವಿವೇಕ ಸಂಜೀವಿನಿ ತರಬೇತಿ ಶಿಬಿರ ಮತ್ತು ‘ವಿವೇಕ ಸಂಜೀವಿನಿ’ ಪ್ರಶಸ್ತಿ ಪ್ರಧಾನ ಸಮಾರಂಭ

0

ಪುತ್ತೂರು: ನಶಿಸಿ ಹೋಗುತ್ತಿರುವ ಔಷಧೀಯ ಗಿಡಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಬಾರಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ‘ ವಿವೇಕಾ ಸಂಜೀವಿನಿ’ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜನಜಾಗೃತಿಯ ಕಾರ್ಯಕ್ರಮ ಜೂ.5ಕ್ಕೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆಯಲಿದೆ ಎಂದು ವಿವೇಕಾನಂದ ವಿಧ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ ಯಂ ಕೃಷ್ಣ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಔಷಧೀಯ ಸಸ್ಯಗಳ ಸಂರಕ್ಷಣೆ , ಸಂವರ್ಧನೆ, ಬಳಕೆ ಹಾಗೂ ಜನ ಜಾಗೃತಿಯ ಆಂದೋಲನಕ್ಕಾಗಿ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ.ದಿನೇಶ್ ನಾಗೇ ಗೌಡ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಮೆಡಿಷಿನಲ್ ಆ್ಯಂಡ್ ಆ್ಯರೋಮೆಟಿಕ್ ಪ್ಲಾಂಟ್ಸ್, ಬೆಂಗಳೂರು ಇವರು ವಹಿಸಲಿರುವರು. ಜೊತೆಗೆ ಈ ಸಂದರ್ಭದಲ್ಲಿ ಔಷಧಿ ಗಿಡಗಳನ್ನು ಸಂರಕ್ಷಿಸಿ, ಪೋಷಿಸುವಂತವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಕೂಡಾ ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಖ್ಯಾತ ಉರಗ ತಜ್ಞ ಡಾ.ರವೀಂದ್ರನಾಥ ಐತಾಳ್ ಹಾಗೂ ಔಷಧೀಯ ಸಸ್ಯಗಳ ಸಂರಕ್ಷಕ ದಿನೇಶ್‌ ನಾಯಕ್‌ ವಿಟ್ಲ ಇವರಿಗೆ ‘ವಿವೇಕ ಸಂಜೀವಿನಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಂಜೆ 3:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಯಂ ಕೃಷ್ಣ ಭಟ್ ಸಭಾಧ್ಯಕ್ಷತೆಯನ್ನು ವಹಿಸಲಿದ್ದು ಕರ್ನಾಟಕ ಪ್ರಾಂತ ಗ್ರಾಮ ವಿಕಾಸ ಸಂಯೋಜಕ ಬಾಲಕೃಷ್ಣ ಕಿಣಿ ಸಮಾರೋಪದ ನುಡಿಗಳನ್ನಾಡಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ವಿವೇಕ ಸಂಜೀವಿನಿ ಇದರ ಸಂಯೋಜಕಿ ರೂಪಲೇಖಾ, ಸರಸ್ವತಿ ವಿದ್ಯಾಲಯ ಕಡಬ ಇದರ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here