ಪುತ್ತೂರು:ಮಳೆಗಾಲದಲ್ಲಿ ದ.ಕ ಜಿಲ್ಲೆಯಾದ್ಯಂತ ಗುರುತಿಸಲಾಗಿರುವ ಪ್ರವಾಹ ಮತ್ತು ಭೂ ಕುಸಿತ ಪ್ರದೇಶಗಳನ್ನು ಹಾಗೂ ಅದಕ್ಕೆ ಪೂರಕವಾದ ಪರಿಹಾರ ಕೇಂದ್ರಗಳನ್ನು ಗುರುತಿಸಿ ದ.ಕ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಹಿರೇಬಂಡಾಡಿ, 34 ನೆಕ್ಕಿಲಾಡಿ, ಬಜತ್ತೂರು, ಪುತ್ತೂರು ಕಸಬ, ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಸುಬ್ರಹ್ಮಣ್ಯ, ಐನೆಕ್ಕಿದು, ಏನೆಕಲ್ಲು, ಕುಟ್ರುಪ್ಪಾಡಿ ಗ್ರಾಮದ ಕುಟ್ರುಪ್ಪಾಡಿ, ಬಲ್ಯ, ಶಿರಾಡಿ, ಕೌಕ್ರಾಡಿ ಗ್ರಾಮದ ಕೌಕ್ರಾಡಿ ಹಾಗೂ ಇಚ್ಲಂಪಾಡಿ ಗ್ರಾಮಗಳನ್ನು ಸಂಭಾವ್ಯ ಪ್ರವಾಹ ಮತ್ತು ಭೂ ಕುಸಿತ ಪ್ರದೇಶಗಳೆಂದು ಗುರುತಿಸಲಾಗಿದೆ.
ಈ ಭಾಗದಲ್ಲಿ ಪರಿಹಾರ ಕೇಂದ್ರಗಳಾಗಿ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸ.ಪ.ಪೂ ಕಾಲೇಜು, ಸಮುದಾಯ ಭವನ ಪುತ್ತೂರು, ಕೊಂಬೆಟ್ಟು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಕಡಬ ತಾಲೂಕಿನ ಸುಬ್ರಹ್ಮಣ್ಯ ಅಭಯ ವಸತಿ ಗೃಹ, ಶಿರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಬ್ರಹ್ಮಣ್ಯ ಅನಘ ವಸತಿ ಗೃಹ, ಸುಬ್ರಹ್ಮಣ್ಯ ಕುಲ್ಕುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ದೇವರ ಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲು ಗುರುತಿಸಲಾಗಿದೆ.