










ಪುತ್ತೂರು: ದಿನಾಂಕ 01. 06. 2023 ನೇ ಗುರುವಾರ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿ ಇಲ್ಲಿ ಪ್ರಿ. ಕೆ. ಜಿ, ಎಲ್. ಕೆ .ಜಿ ,ಯು ಕೆ ಜಿ ,ವಿಭಾಗದ ಪುಟಾಣಿ ವಿದ್ಯಾರ್ಥಿಗಳ ಶಾಲಾ ಆರಂಭೋತ್ಸವ ಕಾರ್ಯಕ್ರಮ ನಡೆಯಿತು. ಪುಟಾಣಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ಶಿಕ್ಷಕರು ಪುಟಾಣಿಗಳಿಗೆ ಆರತಿ ಬೆಳಗಿ, ಅರಿಶಿನ- ಕುಂಕುಮ ಹಾಗೂ ಗುಲಾಬಿ ಹೂನೀಡಿ ಪುಟಾಣಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಸುಮಾರು ನೂರಕ್ಕೂ ಹೆಚ್ಚು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕರಾದ ಶ್ರೀ ರಾಜೇಶ್ ಎನ್ ಮಕ್ಕಳನ್ನು ಹಾಗೂ ಪೋಷಕ ಬಂಧುಗಳನ್ನು ಸಂಸ್ಥೆಗೆ ಸ್ವಾಗತಿಸಿ, ಶುಭ ಹಾರೈಸಿದರು. ಶಿಕ್ಷಕವೃಂದ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











