ವಿದ್ಯಾರ್ಥಿಗಳು ಐ.ಎ.ಎಸ್- ಐ.ಪಿ.ಎಸ್ ಅಧಿಕಾರಿಗಳಾಗಬೇಕು ಶಾಸಕ ಶ್ರೀ ಅಶೋಕ್ ಕುಮಾರ್ ರೈ
ಪುತ್ತೂರು : ಪುತ್ತೂರು ತಾಲೂಕು 19 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸ್ಥಾಪಿಸಿದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಹಾಗೂ ಶಾಲಾ ಪ್ರಾರಂಭೋತ್ಸವ ಮೇ 31 ರಂದು ಕೆಯ್ಯೂರಿನ ಕೆ ಪಿ ಎಸ್ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಅವರು ನೆರೆವೇರಿಸಿ, ವಿದ್ಯಾರ್ಥಿಗಳು ಐ.ಎ.ಎಸ್ ಐ.ಪಿ.ಎಸ್ ಪರೀಕ್ಷೆಗಳನ್ನು ನೀಡಿ ಉನ್ನತ ಅಧಿಕಾರಿಗಳಾಗಬೇಕು, ಸರ್ಕಾರದ ಕಡೆಯಿಂದ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಶಾಲೆಗೆ ಒದಗಿಸುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.
ಶಿಕ್ಷಣದಲ್ಲಿ ಸಂಗೀತ ಮತ್ತು ಸಾಹಿತ್ಯದ ಪಾತ್ರ ಎಂಬ ವಿಷಯದ ಬಗ್ಗೆ ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶೋಭಿತಾ ಸತೀಶ್ ಅವರು ಉಪನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು. ಪುತ್ತೂರು ಕ ಸಾ ಪ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ದತ್ತಿ ನಿಧಿ ಕುರಿತಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧಾ ವಿಜೇತರಿಗೆ ಎ ಕೆ ಜಯರಾಮ್ ರೈ, ದಂಬೆಕಾನ ಸದಾಶಿವ ರೈ, ಚರಣ್ ಕುಮಾರ್ ಸಣಂಗಳ ಇವರು ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಎಸ್ ಭಂಡಾರಿ, ಇಸ್ಮಾಯಿಲ್ ಪಿ, ಪ್ರಾಂಶುಪಾಲರು ಕೆ ಪಿ ಎಸ್ ಕೆಯ್ಯೂರು ಉಪಸ್ಥಿತರಿದ್ದರು.
ಕೆ ಎಸ್ ವಿನೋದ್ ಕುಮಾರ್ ಉಪ ಪ್ರಾಂಶುಪಾಲರು ಅತಿಥಿಗಳನ್ನು ಸ್ವಾಗತಿಸಿದರು. ಬಾಬು ಎಂ ಮುಖ್ಯೋಪಾಧ್ಯಾಯರು ವಂದನಾರ್ಪಣೆ ಮಾಡಿದರು.
ಜೆಸ್ಸಿ ಪಿ ವಿ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶಿಕ್ಷಕವೃಂದ ಸಹಕರಿಸಿದರು.