ಹನುಮಗಿರಿ ಶ್ರೀ ಕ್ಷೇತ್ರಕ್ಕೆ ಬಿ.ಎಲ್ ಸಂತೋಷ್ ಭೇಟಿ – ಅಮರಗಿರಿಯ ಬಗ್ಗೆ ಶ್ಲಾಘನೆ

0

ಪುತ್ತೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ರವರು ಜೂ.3 ರಂದು ಹನುಮಗಿರಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನ ಪಡೆದ ಬಿ.ಎಲ್ ಸಂತೋಷ್‌ರವರು ವಿಶೇಷ ಪೂಜೆ ನೆರವೇರಿಸಿದರು.

ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಸ್ವಾಗತಿಸಿ, ಕ್ಷೇತ್ರದ ಪ್ರಸಾದ ನೀಡಿ ಸತ್ಕರಿಸಿದರು. ಶ್ರೀ ಕೋದಂಡರಾಮ ಕ್ಷೇತ್ರಕ್ಕೆ ಭೇಟಿ ನೀಡಿ ಪುಷ್ಟಾರ್ಚನೆ ಸಲ್ಲಿಸಿದರು. ಅಮಗಿರಿಗೆ ಭೇಟಿ ನೀಡಿದ ಬಿ.ಎಲ್ ಸಂತೋಷ್‌ ಸೈನಿಕ ಸ್ಮಾರಕವಾದ ಕೈಗೆ ರಾಷ್ಟ್ರಧ್ವಜ ಅಳವಡಿಸಿ ವಂದನೆ ಸಲ್ಲಿಸಿದರು. ಹನುಮಗಿರಿ, ರಾಮಗಿರಿ ಮತ್ತು ಅಮರಗಿರಿಗೆ ಭೇಟಿ ನೀಡಿ ಬಳಿಕ ಮಾತನಾಡಿದ ಸಂತೋಷ್‌ರವರು, ಗ್ರಾಮೀಣ ಪರಿಸರದಲ್ಲಿ ಒಂದು ಚೇತೋಹಾರಿ ಪ್ರಯತ್ನ ಇದಾಗಿದೆ. ಸಮಾಜಕ್ಕಾಗಿ ಬದುಕು ಹಿಂದು ಕಲ್ಪನೆಗೆ ಪುಟ ನೀಡುವ ಪರಿಸರ ಇದಾಗಿದೆ. ಧರ್ಮ, ದೇಶ, ಸೈನ್ಯ,ವಿಚಾರ ಎಲ್ಲದರ ಅರಿವು ಮೂಡಿಸುವ ಶ್ಲಾಘ್ಯ ಪ್ರಯತ್ನ. ಅಮರಗಿರಿ ಅರಳಲಿ, ನೂರಾರು ಕಡೆ ಪ್ರತಿಫಲನಗೊಂಡು ನಿರ್ಮಾಣವಾಗಲಿ. ಇಂದಿನ ಪೀಳಿಗೆಗೆ ದೇಶಕ್ಕಾಗಿ ಬದುಕು ಪ್ರೇರಣೆ ನೀಡಲಿ ಎಂದು ಹೇಳಿ ಅಮರಗಿರಿಯ ಪ್ರೇಕ್ಷಕರ ಪುಸ್ತಕದಲ್ಲಿ ಬರೆದು ಸಹಿ ಹಾಕಿದರು. ಕ್ಷೇತ್ರದ ಕಪಿಲಾ ಗೋ ಆಶ್ರಮಕ್ಕೆ ಭೇಟಿ ನೀಡಿ ದನಗಳಿಗೆ ಹಿಂಡಿ ನೀಡಿ ಆಶ್ರಮದ ಕೆಲಸಗಾರರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ಶಿವರಾಮ ಪಿ, ಶಿವರಾಮ ಶರ್ಮ ಕತ್ರಿಬೈಲು, ಬಿಜೆಪಿ ಜಿಲ್ಲಾ ಯುವಮೋರ್ಛಾ ಅಧ್ಯಕ್ಷ ಸಹಜ್ ರೈ ಬಳಜ್ಜ, ಕಾವು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮಂಜುನಾಥ ರೈ ಸಾಂತ್ಯ, ನೆ.ಮುಡ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ದೀಪಕ್ ಕುಮಾರ್ ಮುಂಡ್ಯ, ಶಿವ ಎಸ್.ಪೂಜಾರಿ ನಿಸರ್ಗ, ದೇವಸ್ಥಾನದ ಸಿಬ್ಬಂದಿ ವರ್ಗ, ಅರ್ಚಕ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here