ಅಚಲ್ ಉಬರಡ್ಕ ನಿರ್ದೇಶನ, ನಟನೆಯ ‘ಪಥ’ ಕಿರುಚಿತ್ರದ ಪೋಸ್ಟರ್ ಬಿಡುಗಡೆ

0

ಪುತ್ತೂರು: ಎ.ಯು.ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮತ್ತು ಅಚಲ್ ಉಬರಡ್ಕ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಇನ್ನೊಂದು ಹೊಸ ಕನ್ನಡ ಕಿರುಚಿತ್ರ ’ಪಥ’ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು. ತಲಕಾವೇರಿಯ ಅನುವಂಶಿಕ ಅರ್ಚಕ ಟಿ.ಎಸ್ ಸುಧೀರ್ ಆಚಾರ್ ಬಿಡುಗಡೆಗೊಳಿಸಿದರು. ಅರ್ಚಕ ನಾಗರಾಜ ಭಟ್, ಸಾಯಿಗೀತ, ಸೀತಾರಾಮ ಆಚಾರ್ಯ ಹಾಗೂ ಚಿತ್ರ ತಂಡದವರು ಉಪಸಿತರಿದ್ದರು. ‘ಪಥ’ ಕಿರುಚಿತ್ರದ ಕಥೆ ಮತ್ತು ಛಾಯಾಗ್ರಹಣವನ್ನು ಯೋಶಿತ್ ಬನ್ನೂರು ಮಾಡಿದ್ದು ನಮನ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಅಶ್ವಿನ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಯಕರಾಗಿ ಅಚಲ್ ಉಬರಡ್ಕ ಹಾಗೂ ನಾಯಕಿಯಾಗಿ ವಿಶ್ರಿತ ಆಚಾರ್ಯ ಬಣ್ಣ ಹಚ್ಚಿದ್ದು, ಶರತ್ ಕೆ ಎನ್, ಸ್ವಸ್ತಿಕ್ ಶೆಟ್ಟಿ, ಅರಹಂತ್ ಜೈನ್, ಗಗನ್ ದೀಪ್, ಮಂಜುನಾಥ್ ಜೋಡುಕಲ್ಲು ಮುಂತಾದವರು ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here