ಕಡಬ ಗ್ರಾ.ಯೋಜನಾ ಕಚೇರಿಯಲ್ಲಿ ಪೂರ್ವಭಾವಿ ಸಭೆ

0

ಪುತ್ತೂರು: ಜೂ.21ರಂದು ಕಡಬ ಶ್ರೀ ದುರ್ಗಾಂಭ ಸಭಾಂಗಣದಲ್ಲಿ ನಡೆಯುವ ಜನಜಾಗೃತಿ ವೇದಿಕೆ ಕಡಬ ಇದರ ವತಿಯಿಂದ ಸತ್ಯನಾರಾಯಣ ಪೂಜೆ, ಪದಗ್ರಹಣ ಸಮಾರಂಭ, ನವಜೀವನ ಸಮಾವೇಶದ ಪೂರ್ವ ಭಾವಿ ಸಭೆಯು ತಾಲೂಕಿನ ಜನ ಜಾಗೃತಿ ವೇದಿಕೆ ಯ ಅಧ್ಯಕ್ಷ ಮಹೇಶ್ ಕೆ ಸವಣೂರು ಅಧ್ಯಕ್ಷತೆಯಲ್ಲಿ ಜೂ.2 ರಂದು ಕಡಬ ಯೋಜನೆ ಕಛೇರಿಯಲ್ಲಿ ಜರಗಿತು. ವೇದಿಕೆಯ ತಾಲೂಕು ಉಪಾಧ್ಯಕ್ಷ ಸೀತಾರಾಮ ಪೊಸವಳಿಕೆ, ಸಮಿತಿಯ ತಾಲ್ಲೂಕು ಸದಸ್ಯ ಶಿವಪ್ರಸಾದ್ ರೈ ಮೈಲೇರಿ ಉಪಸ್ಥಿತರಿದ್ದರು.


ಸಭೆಯಲ್ಲಿ ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷ ಜಯನಂದ ಬಂಟ್ರಿಯಲ್,ಕಡಬ ವಲಯದ ಅಧ್ಯಕ್ಷ ಕರುಣಾಕರ ಗೋಗಟೆ, ಬಿಳಿನೆಲೆ ವಲಯದ ಅಧ್ಯಕ್ಷ ತಮ್ಮಯ್ಯ ಗೌಡ, ಆಲಂಕಾರು ವಲಯದ ಅಧ್ಯಕ್ಷ ಇಂದು ಶೇಖರ ಶೆಟ್ಟಿ, ಗೋಳಿ ತೊಟ್ಟು ವಲಯದ ಅಧ್ಯಕ್ಷ ನೋಣಯ್ಯ ಪೂಜಾರಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಮೇದಪ್ಪ ನಾವೂರು ಸ್ವಾಗತಿಸಿ ರವಿಪ್ರಸಾದ್ ಕಾರ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here