ಶಾಸಕರ ಮಾತಿನ ಮುಂದೆ ಆರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಹಿಳಾ ಕಾಂಗ್ರೆಸ್, ಯಂಗ್ ಬ್ರಿಗೇಡ್, ಕಂಬಳ ಸಮಿತಿ ಅವರಿಂದ ಸನ್ಮಾನ, ಬಳಿಕ ಸಾರ್ವಜನಿಕರಿಂದ ಗೌರವ
*ಅಶೋಕ್ ಕುಮಾರ್ ರೈ ಈ ಕ್ಷೇತ್ರದಲ್ಲಿ ಮೂಡಿ ಬಂದ ಧ್ರುವತಾರೆ – ಮಹಮ್ಮದ್ ಬಡಗನ್ನೂರು
*ಮೆಡಿಕಲ್ ಕಾಲೇಜು ತರವ ಪ್ರಯತ್ನದ ಮೂಲಕ ಮಾದರಿ ಶಾಸಕರು – ಹೇಮನಾಥ ಶೆಟ್ಡಿ
*ಪುತ್ತೂರು ಸರ್ವಾಂಗಿಣ ಅಭಿವೃದ್ದಿ – ಡಾ.ರಾಜಾರಾಮ್
*ಮುಂದೆ ಜಿ.ಪಂ, ತಾ.ಪಂ ಚುನಾವಣೆಯಲ್ಲೂ ಕಾಂಗ್ರೆಸ್ ಆಢಳಿತ ಬರಬೇಕು – ಎಮ್ ಎಸ್ ಮೊಹಮ್ಮದ್
*ಇದು ನನ್ನ ಅಭಿನಂದನಾ ಸಭೆಯಲ್ಲ, ಕಾರ್ಯಕರ್ತರ ಅಭಿನಂದನಾ ಸಭೆ – ಅಶೋಕ್‌ಕುಮಾರ್ ರೈ
*ಬದಲಾವಣೆ ಪರ್ವ ಮುಂದೆ ಲೋಕಸಭೆಯಲ್ಲೂ ಆಗಬೇಕು – ಎಮ್ ಬಿ ವಿಶ್ವನಾಥ ರೈ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಮತ್ತು ಕಾಂಗ್ರಸ್ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ, ಮತದಾರರಿಗೆ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ ಜೂ.3 ರಂದು ಪುತ್ತೂರು ಪುರಭವನದಲ್ಲಿ ನಡೆಯಿತು.
ದ ಕ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಅಭಿನಂದನಾ ಭಾಷಣ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್, ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮೊಹಮ್ಮದ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್ ಸುಧಾಕರ್ ಶೆಟ್ಟಿ, ಹೇಮನಾಥ ಶೆಟ್ಟಿ ಕಾವು, ಪಝಲ್ ರಹೀಮ್, ಪ್ರಸಾದ್ ಕೌಶಲ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ ಕೊಲ್ಯ, ಉಮಾನಾಥ್ ಶೆಟ್ಟಿ, ಉಲ್ಲಾಸ್ ಕೋಟ್ಯಾನ್ , ನೂರುದ್ದೀನ್ ಸಾಲ್ಮರ, ಮಹೇಶ್ ಅಂಕೊತಿಮಾರ್, ಸುಭಾಶ್ಚಂದ್ರ ಶೆಟ್ಟಿ, ಶ್ರೀಪ್ರಸಾದ್, ಭಾಸ್ಕರ್ ಕೋಡಿಂಬಾಳ, ಜೋಕಿಂ ಡಿ ಸೋಜ, ಚಂದ್ರಹಾಸ ಶೆಟ್ಟಿ , ಮುರಳೀಧರ್ ರೈ ಮಠಂತಬೆಟ್ಟು, ಪ್ರವೀಣ್ ಚಂದ್ರ ಆಳ್ವ, ಶಕೂರ್ ಹಾಜಿ, ಅಮಳ ರಾಮಚಂದ್ರ, ಪ್ರಶಾಂತ್ ಶೆಟ್ಟಿ, ಸೂತ್ರಬೆಟ್ಟು ಜಗನ್ನಾಥ ರೈ, ಕೃಷ್ಣಪ್ರಸಾದ್ ಆಳ್ವ, ವೇದನಾಥ ಸುವರ್ಣ, ದುರ್ಗಾಪ್ರಸಾದ್ ರೈ, ನೆಲ್ಲಿಕಟ್ಟೆ ಜಗನ್ನಾಥ ರೈ, ಸತೀಶ್ ಕೆಡೆಂಜಿ, ಅನಿತಾ ಹೇಮನಾಥ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ , ಪ್ರದೀಪ್ ಕುಮಾರ್ ರೈ ಪಾಂಬಾರು ಸಹಿತ ಹಲವಾರು ಮಂದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಅಶೋಕ್ ರೈ ನಾನು ಪರಿಶೀಲನೆ ನಡೆಸಿದಾಗ ಮೆಡಿಕಲ್ ಕಾಲೇಜಿಗೆ ಪ್ರಸ್ತಾವನೆಯೇ ಸಲ್ಲಿಸಿರಲಿಲ್ಲ ಎಂಬ ವಿಷಯ ಬೆಳಕಿಗೆ ಬಂತು. ಹಾಗಾಗಿ ನಾನು ಅದನ್ನು ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಕಳುಹಿಸುವ ಮೂಲಕ ಅದರ ಕಾರ್ಯಕ್ಕೆ ವೇಗ ಕೊಟ್ಟಿದ್ದೇನೆ. ಆದರೆ ಸುದ್ದಿ ಪತ್ರಿಕೆಯಲ್ಲಿ ಬಿಜೆಪಿ ಮಾಜಿ ಶಾಸಕರು ಬಿಜೆಪಿ ಆಡಳಿತ ಈ ಹಿಂದೆಯೇ ಪ್ರಸ್ತಾವನೆ ಕಳುಹಿಸಿದೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಸುಳ್ಳು ಎಂಬುದಕ್ಕೆ ದಾಖಲೆ ಇದೆ. ಬಿಜೆಪಿಯವರು ಸುಳ್ಳು ಹೇಳುವುದನ್ನು ಕಡಿಮೆ ಮಾಡಲಿ ಎಂದು ಶಾಸಕರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಭಾಸ್ಕರ್ ಗೌಡ ಕೋಡಿಂಬಾಳ ಸ್ವಾಗತಿಸಿದರು. ನಗರಸಭಾ ಸದಸ್ಯ ರಿಯಾಜ್ ಪರ್ಲಡ್ಕ ವಂದಿಸಿದರು. ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರು ಮತ್ತು ಗಣ್ಯರನ್ನು ಬ್ಯಾಂಡ್ ವಾದ್ಯದೊಂದಿಗೆ ಸ್ವಾಗತಿಸಲಾಯಿತು.
ಇದೇ ವೇಳೆ ಆರ್ಯಾಪು ಗ್ರಾ.ಪಂ ಬಿಜೆಪಿ ಬೆಂಬಲಿತ ಮಾಜಿ ಅಧ್ಯಕ್ಷ ರಮೇಶ್ ರೈ ಡಿಂಬ್ರಿ ಮತ್ತು ಗಿರಿಧರ ಗೌಡ ಸಂಪ್ಯ ಅವರನ್ನು ಕುರಿಯ ಕಾಂಗ್ರೆಸ್ ನ ಸನತ್ ರೈ ಮತ್ತು ಶಿವರಾಮ ಆಳ್ವ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿಹಾರ ರೈಲು ದುರಂತದಿಂದ ಸುಮಾರು 280ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಸಭೆಯ ಆರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬ್ಲಾಕ್ ಕಾಂಗ್ರೆಸ್, ಯಂಗ್ ಬ್ರಿಗೇಡ್, ಮಹಿಳಾ ಕಾಂಗ್ರೆಸ್, ಕೋಟಿ-ಚೆನ್ನಯ ಕಂಬಳ ಸಮಿತಿ ಸಹಿತ ಹಲವಾರು ಮಂದಿ ಶಾಸಕರಿಗೆ ಹಾರಾರ್ಪಣೆ, ಗೌರವ ನೀಡಿದರು. ಇದೇ ಸಂದರ್ಭದಲ್ಲಿ ಅಸ್ಮ ಗಟ್ಟಮನೆ ಅವರ ಮಗಳು ಬಿಡಿಸಿದ ಶಾಸಕರ ಭಾವಚಿತ್ರವನ್ನು ಹಸ್ತಾಂತರಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆಗೆ ಮೊದಲು ಜನತೆಗೆ ನೀಡಲಾಗಿದ್ದ ಎಲ್ಲಾ ಗ್ಯಾರೆಂಟಿ ಭರವಸೆಗಳ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ನೀಡಿದ್ದ ಹಿನ್ನಲೆಯಲ್ಲಿ ಕಾರ್ಯಕ್ರಮದ ಆರಂಭ ಕಿಲ್ಲೆ ಮೈದಾನದಲ್ಲಿ ಪಕ್ಷದ ವತಿಯಿಂದ ಪಟಾಕಿ ಸಿಡಿಸಿ ಹರ್ಷ ವ್ಯಕ್ತ ಪಡಿಸಲಾಯಿತು.