ಪುತ್ತೂರು ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷರಾಗಿ ಆಶಿಕ್ ಸಂಪ್ಯ ಆಯ್ಕೆ

0

ಪುತ್ತೂರು: ಯಂಗ್ ಬ್ರಿಗೇಡ್ ಸೇವಾದಳದ ನೂತನ ಅಧ್ಯಕ್ಷರಾಗಿ ಆಶಿಕ್ ಸಂಪ್ಯರವರನ್ನು ಆಯ್ಕೆ ಮಾಡಲಾಗಿದೆ. ಪುತ್ತೂರು ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷರಾಗಿದ್ದ ರಂಜಿತ್ ಬಂಗೇರ ಜಿಲ್ಲಾ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷರಾದ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಈ ಆಯ್ಕೆಯನ್ನು ನಡೆಸಲಾಯಿತು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಸೂಚನೆಯಂತೆ ಜಿಲ್ಲಾ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ರಂಜಿತ್ ಬಂಗೇರರ ಶಿಫಾರಸ್ಸಿನ ಮೇರೆಗೆ ರಾಜ್ಯ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಜುನೈದ್ ಪಿ.ಕೆ ಈ ನೇಮಕ ಮಾಡಿದ್ದಾರೆ. ಆಶಿಕ್ ಸಂಪ್ಯರವರು ಸಂಪ್ಯ ನಿವಾಸಿ ಪಿ. ಇಬ್ರಾಹಿಂ ಮತ್ತು ನೆಬಿಸಾ ಇಬ್ರಾಹಿಂರವರ ಪುತ್ರ.

LEAVE A REPLY

Please enter your comment!
Please enter your name here