ಉಪ್ಪಿನಂಗಡಿ: ಅರಫಾ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ

0

ಪುತ್ತೂರು: ಉಪ್ಪಿನಂಗಡಿಯಲ್ಲಿ ರಾಷ್ತ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಅರಫಾ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ಜೂ.1 ರಂದು ನಡೆಯಿತು.

ಶಾಲೆಯನ್ನು ಸುಂದರವಾಗಿ ಅಲಂಕಾರಗೊಳಿಸಲಾಗಿತ್ತು. ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಂಡ ನಂತರ ಅಧ್ಯಾಪಕರು ಸಿಹಿತಿಂಡಿಗಳನ್ನು ವಿತರಿಸಿ ಸ್ವಾಗತಿಸಿ, ಉಡುಗೊರೆಗಳನ್ನು ನೀಡಿದರು. ಎಲ್ಲಾ ತರಗತಿಯ ಮಕ್ಕಳಿಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಶಾಲೆಯ ವಾತಾವರಣ ಮಕ್ಕಳ ಮನಸ್ಸಿಗೆ ಆಹ್ಲಾದಕರವಾಗಿರುವಂತೆ ವಿವಿಧ ಬಣ್ಣದ ಅಲಂಕಾರ ವಸ್ತುಗಳಿಂದ ಅಲಂಕರಿಸಲಾಗಿತ್ತು. ಈ ಸಂಧರ್ಭದಲ್ಲಿ ಶಾಲೆಯ ಸಂಚಾಲಕರಾದ ಹಾಜಿ ಕೆ.ಪಿ.ಎ ಸಿದ್ದೀಕ್, ಮುಖ್ಯ ಶಿಕ್ಷಕಿಯಾದ ಕವಿತಾ ನವೀನ್ ಕುಲಾಲ್ ಹಾಗೂ ಅಧ್ಯಾಪಕ ವೃಂದ ಮತ್ತು ಸಿಬ್ಬಂದಿಗಳು, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here