ವಿಟ್ಲದ ಸಪ್ತ ಜ್ಯುವೆಲ್ಸ್ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಉದ್ಘಾಟನೆ

0

ಸಪ್ತ ಜ್ಯುವೆಲ್ಸ್ ವಿಶೇಷತೆಗಳು

  • ವೆಡ್ಡಿಂಗ್ ಸೆಟ್‌ಗಳ ಬೃಹತ್ ಸಂಗ್ರಹ
  • ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ ಗೆ 100 ರೂಪಾಯಿ ಕಡಿತ
  • ಬೆಳ್ಳಿಯ ಆಭರಣಗಳ ಮೇಲೆ 5% ಡಿಸ್ಕೌಂಟ್
  • ಪ್ರತೀ 5೦೦೦ ರೂ ಖರೀದಿಗೆ ಚಿನ್ನದ ನೆಕ್ಲೆಸ್ ಗೆಲ್ಲುವ ಅವಕಾಶ
  • ಸಪ್ತ ಅಕ್ಷಯ ಯೋಜನೆಗೆ ಸೇರುವವರಿಗೆ ಸಿಗಲಿದೆ ವಿಶೇಷ ಉಡುಗೊರೆ
  • ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ
  • 916 ಶುದ್ಧತೆಯ ಹೆಚ್.ಯು.ಐ.ಡಿ. ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳು
  • ದೇವರ-ದೈವಗಳ ಆಭರಣಗಳು ಮತ್ತು ಪರಿಕರಗಳು

ವಿಟ್ಲ: ಇಲ್ಲಿನ ಎಂಪಾಯರ್ ಮಾಲ್‌ನಲ್ಲಿ ಕಳೆದ ಐದು ವರುಷಗಳಿಂದ ವ್ಯವಹರಿಸುತ್ತಿದ್ದ ಸಪ್ತ ಜ್ಯುವೆಲ್ಸ್, ಪುತ್ತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ವಿಸ್ತೃತ ಮಳಿಗೆಗೆ ಸ್ಥಳಾಂತರಗೊಂಡು ಜೂ.5ರಂದು ಉದ್ಘಾಟನೆಗೊಂಡಿತು.
ಸಂಸ್ಥೆಯನ್ನು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಹಕರಿಗೆ ಸಂಸ್ಥೆ ಮೇಲಿರುವ ವಿಶ್ವಾಸವೆ ಸಂಸ್ಥೆಯ ಬೆಳವಣಿಗೆಗೆ ಪೂರಕ ಎಂದರು.

ದೇಶದಲ್ಲಿ ಜನ ಸಂಖ್ಯೆಯ ಶೇ.66ರಷ್ಟು ಯುವ ಸಮುದಾಯವಿದ್ದು, ದುಡಿದು ಖರ್ಚು ಮಾಡುವವರ ಸಂಖ್ಯೆ ಹೆಚ್ಚಿದ್ದಾಗ ವ್ಯಾಪಾರಕ್ಕೆ ಅನುಕೂಲ ಸ್ಥಿತಿ ನಿರ್ಮಾಣವಾಗುತ್ತದೆ. ಕ್ಷೀಣವಾಗಿ ಹೋಗುವ ಹಾಗೂ ವೃದ್ಧಿಯಾಗುವ ರೀತಿಯ ಖರ್ಚುಗಳಿದ್ದು, ಬಂಗಾರ ಎರಡನೇ ವಿಭಾಗಕ್ಕೆ ಸೇರಿದ್ದಾಗಿದೆ. ಬಂಗಾರ ಉಪಯೋಗಿಸುವ ಜತೆಗೆ ಮೌಲ್ಯ ವೃದ್ಧಿಯಾಗುತ್ತದೆ. ಬಂಗಾರ ಖರೀದಿಗೆ ಪ್ರತಿನಿತ್ಯವೂ ಉತ್ತಮವಾದ ದಿನವಾಗಿರುತ್ತದೆ. ಸಪ್ತ ಜ್ಯುವೆಲ್ಸ್ ಅತ್ಯಲ್ಪ ಅವಧಿಯಲ್ಲಿ ಜನ ಮೆಚ್ಚುಗೆ ಪಡೆದ ಸಂಸ್ಥೆಗಳಲ್ಲೊಂದಾಗಿದೆ. ಗ್ರಾಹಕರ ಆಕಾಂಕ್ಷೆ, ಅಪೇಕ್ಷೆಗಳನ್ನು ಪೂರೈಕೆ ಮಾಡುವುದು ವ್ಯಾಪಾರಸ್ಥರ ಆದ್ಯ ಕರ್ತವ್ಯವಾಗಿದೆ. ಗ್ರಾಹಕರಿಗೆ ಕ್ಲಪ್ತ ಸಮಯಕ್ಕೆ ಚಿನ್ನಾಭರಣವನ್ನು ಪೂರೈಕೆ ಮಾಡುವ ಮೂಲಕ ಸಮಯ ಪಾಲನೆಯನ್ನು ಮಾಡುವುದರಿಂದ ಹೆಚ್ಚಿನ ವಿಶ್ವಾಸವನ್ನು ಗಳಿಸಬಹುದು. ಸಪ್ತ ಸಂಸ್ಥೆಯ ಮೂಲಕ ವಿಟ್ಲ ಭಾಗದ ಜನರ ಜತೆಗೆ ಎಲ್ಲರಿಗೂ ಉತ್ತಮ ಸೇವೆ ಸಿಗುವಂತಾಗಲಿ. ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಅವರು ಶುಭಹಾರೈಸಿದರು.

ವಿಟ್ಲ ಅರಮನೆಯ ಬಂಗಾರು ಅರಸರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಕುಮಾರ್ ಕಮ್ಮಾಜೆ, ಉದ್ಯಮಿ ಸುಬ್ರಾಯ ಪೈ ಶುಭಹಾರೈಸಿದರು.
ಗ್ರಾಹಕರಾದ ವಸಂತ ಭಟ್ ಮಾದಕಟ್ಟೆ, ವಿಟ್ಲ ಚಂದ್ರನಾಥ ದೇವರ ಬಸದಿಯ ಆಡಳಿತದಾರರಾದ ವಿನಯ ಕುಮಾರ್ ಡಿ., ವಿಟ್ಲ ಚಂದ್ರನಾಥ ದೇವರ ಬಸದಿಯ ಜಿತೇಶ್, ಸಂಸ್ಥೆಯ ಪಾಲುದಾರರಾದ ಸುದರ್ಶನ್ ಕುಮಾರ್ ಇರ್ಕಲಾಜೆ, ನಿಶಾ ಪ್ರಶಾಂತ ಸರಳಾಯ, ಕೃಷ್ಣ ಪ್ರಸಾದ್ ಕಡವ, ಗೋವಿಂದರಾಜ ಕಲ್ಲಮಜಲು, ಬರೆಂಗಾಯಿ ಕೃಷ್ಣ ಭಟ್, ನಡುಸಾರು ರಾಮಚಂದ್ರ ಭಟ್, ಪಡಾರು ಶಶಿ ಕುಮಾರ್ ಭಟ್, ಸುಬ್ರಹ್ಮಣ್ಯ ಪ್ರಸಾದ್ ಯರ್ಮುಂಜ, ರವೀಶ್ ಎಲ್ ಆರ್ ಮೊದಲಾದವರು ಉಪಸ್ಥಿತರಿದ್ದರು.

ಪಾಲುದಾರರಾದ ಸುಕುಮಾರ ಕಲ್ಲಮಜಲು ಸ್ವಾಗತಿಸಿದರು. ದೇವಿಪ್ರಸಾದ್ ಚಂಗಲ್ಪಾಡಿ ವಂದಿಸಿದರು. ಶಿವಪ್ರಕಾಶ್ ಪಂಜಿಬಲ್ಲೆ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ವಿನ್ಯಾಸದ ಚಿನ್ನಾಭರಣಗಳು: ಸಪ್ತ ಜ್ಯುವೆಲ್ಸ್‌ನಲ್ಲಿ ಸ್ಥಳೀಯ ನುರಿತ ಕುಶಲ ಕರ್ಮಿಗಳಿಂದ ತಯಾರಿಸಲ್ಪಟ್ಟ ವಿವಿಧ ವಿನ್ಯಾಸದ ಚಿನ್ನಾಭರಣಗಳ ಬೃಹತ್ ಸಂಗ್ರಹವಿದೆ. ಪಾರಂಪರಿಕ ಆಭರಣಗಳು, ಮಾಂಗಲ್ಯ ಸರ, ನವರತ್ನದ ಉಂಗುರ, ಲೈಟ್ ವೈಟ್ ರಿಂಗ್ , ಕಾಸ್ಟಿಂಗ್ ರಿಂಗ್, ಕಪಲ್ ರಿಂಗ್, ಕ್ಲೋಸೆಟ್ಟಿಂಗ್ ರಿಂಗ್, ಬರ್ತ್ ಸ್ಟೋನ್ ರಿಂಗ್, ಪವಿತ್ರ ರಿಂಗ್, ಕರ್ಟ್ಸ್ ಬಳೆಗಳು, ಬೆಂಡೋಲೆಗಳು, ಹವಳ – ಮುತ್ತಿನ ಸರಗಳು, ಕೊತ್ತಂಬರಿಸರ, ಮೋಹನಸರ, ಕನಕಸರ, ರೇಡಿಯೋ ಚೈನ್, ಲೈಟ್ ವೈಟ್ ಸಿರಾಮಿಕ್ ಸ್ಟಡ್ಸ್, ಕೊಡಗು ಶೈಲಿಯ ಕೊಕ್ಕೆತಾತಿ ಪೆಂಡೆಂಟ್‌ಗಳು, ಕೊಕ್ಕೆತಾತಿ ಕಿವಿಯೋಲೆಗಳು, ಟೆಂಪಲ್ ಕಲೆಕ್ಷನ್‌ನಲ್ಲಿ ವಿವಿಧ ರೀತಿಯ ಮೆರುಗನ್ನು ಕೊಡುವ ವಿನ್ಯಾಸಗಳು, ಫೈ ಇನ್ ವನ್ ಹಾರಗಳು, ಫ್ಯೂಜನ್ ಕಲೆಕ್ಷನ್, ಚೆಟ್ಟಿನಾಡ್ ಕಲೆಕ್ಷನ್, ನಕ್ಷಿ ಓರ್ನಮೆಂಟ್ಸ್ ಇವುಗಳಲ್ಲಿ ವೆಡ್ಡಿಂಗ್ ಸೆಟ್ ಹಾಗೂ ಡಿವೈನ್ ಸೆಟ್ ಗಳು ಲಭ್ಯವಿದೆ. ರಿಚ್ ಲುಕ್ ನೀಡುವ ರೂಬಿ, ಎಮ್ರೋಲ್ಡ್ ಸಿಝೆಡ್ ಸ್ಟೋನ್ ಗಳಲ್ಲಿ ಮಾಡಿದ ಚಿನ್ನಾಭರಣಗಳ ಸಂಗ್ರಹವಿದೆ. ಉತ್ತಮ ಕಾರ್ಯ ಕೌಶಲ್ಯತೆ ಹೊಂದಿರುವ ಕೊಲ್ಕತ್ತಾ, ಬೆಂಗಾಳಿ, ಬಾಂಬೆ ಶೈಲಿಯ ವೆಡ್ಡಿಂಗ್ ಸೆಟ್ಟ್ ಗಳು ಸಹ ದೊರೆಯುತ್ತಿರುವುದು ಸಂಸ್ಥೆಯ ವಿಶೇಷತೆಯಾಗಿದೆ. ಕೊಲ್ಲಾಪುರ ಲೈಟ್ ವೈಟ್ ವ್ಯಾಕ್ಸ್ ಮಾಲೆಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಬೆಂಗಾಲಿ ಹ್ಯಾಂಡ್ ಮೇಡ್ ಚೈನ್, ಕೊಯಮುತ್ತೂರು ಸ್ಪೆಷಲ್ ಕಟ್ಟಿಂಗ್ ಚೈನ್, ಕೇರಳ ಹ್ಯಾಂಡ್ ಮೇಡ್ ಚೈನ್ಸ್, ಇಂಡೋ ಇಟೇಲಿಯನ್ ಚೈನ್ಸ್ ಸಹಿತ ಹಲವಾರು ಬಗೆಯ ವಿನೂತನ ಶೈಲಿಯ ಚಿನ್ನಾಭರಣಗಳು ಲಭ್ಯವಿದೆ.

ವಿವಿಧ ವಿನ್ಯಾಸದ ಪೆಂಡೆಂಟ್ ಗಳು: ವಿವಿಧ ವಿನ್ಯಾಸದ ಬೆಂಗಾಳಿ ವರ್ಕ್ ನ ಪೆಂಡೆಂಟ್, ಪಾರಂಪರಿಕ ಲಕ್ಷ್ಮೀ ಪೆಂಡೆಂಟ್, ಮಲ್ಲಿಗೆ ಮೊಗ್ಗು ಪೆಂಡೆಂಟ್, ಗಿಲಿಯೋಲೆ ಪೆಂಡೆಂಟ್, ಪಿಲಿಗಿರಿ ವರ್ಕ್ ಪೆಂಡೆಂಟ್, ಎಂಬೋಸಿಂಗ್ ಪೆಂಡೆಂಟ್ ಸಹಿತ ವಿವಿಧ ರೀತಿಯ ಪೆಂಡೆಂಟ್ ಗಳು ಲಭ್ಯವಿದೆ.

ಬೆಳ್ಳಿಯ ಆಭರಣಗಳೂ ಲಭ್ಯ: ಕಾಲು ಚೈನ್, ಕಾಲುಂಗುರ, ಸರಗಳು, ಉಂಗುರಗಳು, ಬರ್ತ್ ಸ್ಟೋನ್ ಉಂಗುರಗಳು, ಪೆಂಡೆಂಟ್ ಗಳು, ಮಕ್ಕಳ ದೃಷ್ಟಿಬಳೆ, ದೃಷ್ಟಿ ಚೈನ್ ಗಳು, ಬೆಳ್ಳಿಯ ಮದುಪರ್ಕ, ದೀಪ, ವಿವಿಧ ರೀತಿಯ ಆರತಿಗಳು, ಹರಿವಾಣ, ಬೆಳ್ಳಿಯ ಆರ್ಟ್ ವರ್ಕ್ ಗಳು ಲಭ್ಯವಿದೆ. ಸಿಲ್ವರ್ ಫಾಯಿಲ್ ಕಲೆಕ್ಷನ್ ನ ಫ್ರೇಮ್ ಗಳು, ಪ್ರೈಮಾ ಆರ್ಟ್ ಮತ್ತು ಆರ್ಯ ಆರ್ಟ್ ನ ಬ್ರ್ಯಾಂಡೆಡ್ ಗಿಫ್ಟ್ ಫಾಯಿಲ್ ಕಲೆಕ್ಷನ್ ಗಳು ದೊರೆಯುತ್ತದೆ.

ಉದ್ಘಾಟನಾ ಕೊಡುಗೆಗಳು: ಸಪ್ತ ಜ್ಯುವೆಲ್ಸ್ ಸಂಸ್ಥೆಯು ಸ್ಥಳಾಂತರಗೊಂಡು ಉದ್ಘಾಟನೆಗೊಳ್ಳಲಿರುವ ಶುಭ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲು ಉದ್ದೇಶಿಸಿದೆ. ಚಿನ್ನಾಭರಣ ಖರೀದಿ ವೇಳೆ ಪ್ರತೀ ಗ್ರಾಂ.ಗೆ 100 ರೂಪಾಯಿ ಕಡಿತ ಹಾಗೂ ಬೆಳ್ಳಿ ಆಭರಣಗಳಲ್ಲಿ 5% ಡಿಸ್ಕೌಂಟ್ ದೊರೆಯಲಿದೆ. ಅದು ಅಲ್ಲದೆ ಗ್ರಾಹಕರಿಗೆ ಪ್ರತೀ 5೦೦೦ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿ ವೇಳೆ ಅದೃಷ್ಟ ಚೀಟಿ ನೀಡಲಾಗುವುದು. ಈ ಚೀಟಿಯ ಮುಖಾಂತರ ಒಂದು ಪವನ್ ನ ಚಿನ್ನದ ನೆಕ್ಲೆಸ್ ಗೆಲ್ಲುವ ಅವಕಾಶವಿದೆ. ಜೂ.30ರ ವರೆಗೆ ಸಂಸ್ಥೆಯಲ್ಲಿ ಚಿನ್ನಾಭರಣದ ಶುದ್ದತೆಯನ್ನು ಉಚಿತವಾಗಿ ಪರೀಕ್ಷೆ ಮಾಡಿಕೊಡುವ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ.

‘ಸಪ್ತ ಅಕ್ಷಯ’ ಆಭರಣ ಖರೀದಿ ಯೋಜನೆ: ಇದು ಗ್ರಾಹಕರಿಗೆ ಉಪಕಾರಿಯಾಗಿರುವ ಒಂದು ಯೋಜನೆಯಾಗಿದೆ. ಗ್ರಾಹಕರು ಪ್ರತಿ ತಿಂಗಳು ತಮ್ಮ ಆದಾಯದಲ್ಲಿನ ಸಣ್ಣಮೊತ್ತವನ್ನು ವಿನಿಯೋಗಿಸಿ, ಪ್ರತಿ ವರುಷ ಬಂಗಾರವನ್ನು ಖರೀದಿಸುವ ಒಂದು ಉತ್ತಮ ಯೋಜನೆಯಾಗಿದೆ. ಹನ್ನೊಂದು ತಿಂಗಳ ಯೋಜನೆ ಇದಾಗಿದ್ದು, ಪ್ರತೀ ತಿಂಗಳು 5೦೦ ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬೇಕಾದರೂ ಪಾವತಿಸಬಹುದಾಗಿದೆ. ಆ ಮೊತ್ತದ ಚಿನ್ನಾಭರಣವನ್ನು ತಮ್ಮ ಅಕೌಂಟಿನಲ್ಲಿ ಜಮೆ ಮಾಡಲಾಗುತ್ತದೆ. ತಾವು ಪಾವತಿಸಿದ ಮೊತ್ತಕ್ಕೆ ಕೊನೆಯಲ್ಲಿ ಆವರ್ತನಾ ಪದ್ಧತಿಯಲ್ಲಿ ಬೋನಸ್ ಲಭಿಸಲಿದೆ. ಸಂಸ್ಥೆಯ ಉದ್ಘಾಟನಾ ಸಂದರ್ಭದಲ್ಲಿ ಸಪ್ತ ಅಕ್ಷಯ ಯೋಜನೆಗೆ ಸೇರ್ಪಡೆಗೊಳ್ಳುವ ಗ್ರಾಹಕರಿಗೆ ವಿಶೇಷ ಉಡುಗೊರೆಗಳು ದೊರೆಯಲಿದೆ.

ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇವೆ
ಎಲ್ಲಾ ಪೀಳಿಗೆಯ ಜನರ ಮನಸ್ಸಿಗೆ ಒಪ್ಪುವಂತಹ ಆಭರಣಗಳ ಸಂಗ್ರಹವನ್ನು ನೂತನ ಮಳಿಗೆಯಲ್ಲಿ ಜೋಡಿಸಿಕೊಳ್ಳಲಾಗಿದೆ. 916 ಶುದ್ಧತೆಯ ಎಚ್. ಯು. ಐ. ಡಿ. ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಸ್ಥಳಾಂತರದ ನಿಟ್ಟಿನಲ್ಲಿ ಗ್ರಾಹಕರಿಗೂ ವಿಶೇಷ ಕೊಡುಗೆಗಳನ್ನು ನೀಡಲಾಗಿದ್ದು, ಗ್ರಾಹಕರ ಅನುಕೂಲಕ್ಕೆ ಬೇಕಾದ ರೀತಿಯಲ್ಲಿ ನೂತನ ಮಳಿಗೆಯ ವಿನ್ಯಾಸ ಮಾಡಲಾಗಿದೆ. ಮಾತ್ರವಲ್ಲದೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದೆ. ಕಳೆದ ಐದು ವರ್ಷಗಳಿಂದ ಈ ಭಾಗದ ಜನರು ನಮಗೆ ಉತ್ತಮ ರೀತಿಯಲ್ಲಿ ಸಹಕಾರವನ್ನು ನೀಡಿದ್ದಾರೆ. ಅವರಿಗೆ ನಾವು ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇವೆ.
ಅಜಕ್ಕಳ ಶ್ಯಾಮ ಭಟ್, ಪಾಲುದಾರರು

LEAVE A REPLY

Please enter your comment!
Please enter your name here