ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ Pre K G, LKG, UKG ಶಾಲಾರಂಭ – ಚಿಣ್ಣರ ಕಲರವ

0

ಆಕರ್ಷಣೀಯವಾಗಿತ್ತು ಮೈ ಫಸ್ಟ್ ಡೇ ” ಫೋಟೋ ಫ್ರೇಮ್

ಕಾಣೆಯೂರು : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ Pre K G, LKG , UKG ಜೂ 5ರಂದು ಶಾಲಾರಂಭಗೊಂಡಿದ್ದು ಪ್ರಗತಿಯ ಅಂಗಣವೆಲ್ಲ ಚಿಣ್ಣರ ಕಲರವದಿಂದ ಕೂಡಿತ್ತು. ಮುದ್ದು ಮುದ್ದು ಪುಟಾಣಿಗಳು ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ ತರಗತಿಗೆ ಪ್ರವೇಶಿಸಿದ ರೀತಿ, ಪುಟಾಣಿಗಳ ಕೇಕೆ ಅಂತೂ ಎಲ್ಲರ ಮನಸೂರಗೊಂಡಿತು. ತರಗತಿಯ ಕೊಠಡಿಯೆಲ್ಲ ಅಲಂಕಾರಗೊಂಡು ವಿಶೇಷ ಮೆರುಗನ್ನು ನೀಡಿತು . ಶಾಲಾ ಸಂಚಾಲಕರ ಸಹಿತ ಶಿಕ್ಷಕಿಯರಾದ ಸವಿತಾ , ಶೃತಿ, ಸುಚೇತ , ರೇವತಿ , ಮೇಘನಾ ಮುದ್ದು ಮಕ್ಕಳನ್ನು ಸಮಾಧಾನಿಸುತ್ತಾ ವಿವಿಧ ಆಟಗಳೊಂದಿಗೆ ಮಕ್ಕಳನ್ನು ಮನರಂಜಿಸಿದರು.

ವಿಶೇಷ ಆಕರ್ಷಣೆ:
ತರಗತಿಯ ಹೊರಗೆ ಬಲೂನಿನಿಂದ ಮಾಡಿದ ಕಮಾನು , ‘ಮೈ ಫಸ್ಟ್ ಡೇ ” ಫೋಟೋ ಫ್ರೇಮ್ ಆಕರ್ಷಣೀಯವಾಗಿದ್ದು ಹೆತ್ತವರು ತಮ್ಮ ಮಕ್ಕಳ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ಜೂನ್ 5 ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪುಟಾಣಿಗಳು ಗಿಡವನ್ನು ನೆಡುವ ಮೂಲಕ ಪರಿಸರದ ಜಾಗೃತಿಯನ್ನು ಮೂಡಿಸಿದರು.

LEAVE A REPLY

Please enter your comment!
Please enter your name here