ಕೆಯ್ಯೂರು ಹಾಲು ಉ.ಸ.ಸಂಘದ ಚುನಾವಣೆ-ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ

0

ಪುತ್ತೂರು: ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘ ಮಾಡಾವು ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶನ 13 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.

ಮೇ.30 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಜೂ.4 ರಂದು ನಾಮಪತ್ರಗಳ ಪರಿಶೀಲನೆ ನಡೆದಿತ್ತು.ಒಟ್ಟು 13 ಸ್ಥಾನಗಳಿಗೆ ಜೂ.11 ರಂದು ಚುನಾವಣೆ ನಡೆಯಬೇಕಿತ್ತು ಆದರೆ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ . ಸಾಮಾನ್ಯ 7, ಪ.ಜಾತಿ ಮೀಸಲು 1, ಪ.ಪಂಗಡ ಮೀಸಲು 1, ಹಿ.ವರ್ಗ ಎ ಮೀಸಲು 1, ಹಿ.ವರ್ಗ ಬಿ.ಮೀಸಲು 1, ಮಹಿಳಾ ಮೀಸಲು ಸ್ಥಾನ 2 ಒಟ್ಟು 13 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ ಎಂದು ರಿಟರ್ನಿಂಗ್ ಅಫೀಸರ್ ಶೋಭಾ ಎನ್.ಎಸ್.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here