ನೆಲ್ಯಾಡಿ ಬೆಥನಿ ಐಟಿಐ 27ನೇ ವಾರ್ಷಿಕೋತ್ಸವ

0

ನೆಲ್ಯಾಡಿ: ಪ್ರಸ್ತುತ ಸನ್ನಿವೇಶದಲ್ಲಿ ಸಾಮಾನ್ಯ ವಿದ್ಯಾಭ್ಯಾಸ ಕಲಿಯುವುದಕ್ಕಿಂತ ಭವಿಷ್ಯದ ದೃಷ್ಟಿಯಿಂದ ಐಟಿಐ ವಿದ್ಯಾಭ್ಯಾಸದ ಮೂಲಕ ಉದ್ಯೋಗ ಪಡೆಯಲು ಸುಲಭ. ಅದಕ್ಕಾಗಿ ಪ್ರೌಢಶಿಕ್ಷಣದ ಸಂದರ್ಭದಲ್ಲಿಯೇ ತಾಂತ್ರಿಕ ಶಿಕ್ಷಣದ ಅಗತ್ಯತೆ ಬಗ್ಗೆ ವಿವಿಧ ರೀತಿಯಲ್ಲಿ ಮಕ್ಕಳಿಗೆ ವಿಶೇಷ ಕಾರ್ಯಗಾರಗಳನ್ನು ನಡೆಸುವುದು ಉತ್ತಮ ಎಂದು ಕಾಂಚನ ಶ್ರೀ ವೆಂಕಟಸುಬ್ರಮಣ್ಯ ಸ್ಮಾರಕ ಪ್ರೌಢಶಾಲಾ ಮುಖ್ಯಗುರು ರಮೇಶ್ ಮಯ್ಯರವರು ಹೇಳಿದರು.


ಅವರು ನೆಲ್ಯಾಡಿ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ 27ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕರಾದ ರೆ.ಫಾ.ಮೆಲ್ವಿನ್ ಮ್ಯಾಥ್ಯು ಓಐಸಿಯವರು ಶುಭಹಾರೈಸಿದರು. 27ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿದ ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ತೋಮಸ್ ಹಾಗೂ ಕಿರಿಯ ತರಬೇತಿ ಅಧಿಕಾರಿ ಶಿವಾನಂದ ಎಸ್ ಅವರನ್ನು ಗೌರವಿಸಲಾಯಿತು.

ರೆ.ಫಾ. ತೋಮಸ್ ಬಿಜಿಲಿ ಓಐಸಿ, ರೆ.ಫಾ. ಜೈಸನ್ ಸೈಮನ್ ಓಐಸಿ ಮತ್ತು ನೆಲ್ಯಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಬ್ಬಾರ್‌ರವರು ಶುಭ ಹಾರೈಸಿದರು. ಸಂಸ್ಥೆಯ ತರಬೇತಿ ಅಧಿಕಾರಿ ಜಾನ್ ಪಿ.ಎಸ್. ಸ್ವಾಗತಿಸಿ, ಕಾರ್ಯದರ್ಶಿ ಶಿವಾನಂದ ಎಸ್., ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

LEAVE A REPLY

Please enter your comment!
Please enter your name here