ಉಪ್ಪಿನಂಗಡಿ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುನ್ನಡೆಸುತ್ತಿರುವ ಉಪ್ಪಿನಂಗಡಿ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು.
ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಿ.ಜಗದೀಶ್ ನಾಯಕ್‌ರವರು ಇಕೋ ಕ್ಲಬ್ ಉದ್ಘಾಟನೆಯೊಂದಿಗೆ ಗಿಡ ನೆಟ್ಟರು. ಬಳಿಕ ಮಾತನಾಡಿದ ಅವರು, ರೋಟರಿ ಕ್ಲಬ್ ವತಿಯಿಂದ ಸಂಸ್ಥೆಗೆ ಪ್ರೊಜೆಕ್ಟರ್ ಕೊಡುಗೆಯಾಗಿ ನೀಡಿದ್ದು ಜನರ ಶ್ರೇಯೋಭಿವೃದ್ಧಿಗೆ ರೋಟರಿ ಕ್ಲಬ್ ದುಡಿಯುತ್ತಿದೆ. ವಿದ್ಯಾಸಿರಿ, ಆರೋಗ್ಯಸಿರಿ, ಜಲಸಿರಿ, ವನಸಿರಿಯಂತಹ ಸೇವಾ ಯೋಜನೆಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಸೇವೆ ನೀಡುತ್ತಿದೆ ಎಂದರು.
ಶಾಲೆಯ ಪರಿವೀಕ್ಷಕರಾದ ಬಾಲಕೃಷ್ಣ ಗೌಡ ಬಿ.ಟಿ.ಅವರು ಪರಿಸರ ಸಂರಕ್ಷಣೆಯ ಅರಿವು ಮತ್ತು ಮಹತ್ವದ ನುಡಿಗಳನ್ನಾಡಿದರು. ರೋಟರಿಯ ರಾಜೇಶ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಗೌಡ ಶುಭಹಾರೈಸಿದರು. ಸಂಸ್ಥೆಯ ಮುಖ್ಯಶಿಕ್ಷಕಿ ಲಕ್ಷ್ಮೀ ಪಿ.,ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಹೆಚ್.ವಂದಿಸಿದರು. ಶಿಕ್ಷಕರಾದ ಶಕುಂತಲಾ ಕೆ., ಭವ್ಯ ವೈ, ಡೊಂಬಯ ಗೌಡ ಸಹಕರಿಸಿದರು. ವಿಜ್ಞಾನ ಶಿಕ್ಷಕಿ ಸವಿತಾ ಪಿ.ಸಿ.ಕಾರ್ಯಕ್ರಮ ನಿರೂಪಿಸಿದರು.