ರೇಡಿಯೋ ಪಾಂಚಜನ್ಯದಲ್ಲಿ `ವಿವೇಕ ಸಂಜೀವಿನಿ’ ಸರಣಿ ಕಾರ್ಯಕ್ರಮ ಉದ್ಘಾಟನೆ

0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಆಶ್ರಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜನಜಾಗೃತಿಯ ಆಂದೋಲನ `ವಿವೇಕ ಸಂಜೀವಿನಿ’ ಕಾರ್ಯಕ್ರಮ ವಿಶ್ವ ಪರಿಸರ ದಿನದಂದು ಉದ್ಘಾಟನೆಗೊಂಡಿತು. ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರದ ವತಿಯಿಂದ ಪ್ರತೀ ವಾರ ನಡೆಯುವ ವಿವೇಕ ಸಂಜೀವಿನಿ ಸರಣಿ ಕಾರ್ಯಕ್ರಮದ ಬಿಡುಗಡೆ ಕಾರ್ಯಕ್ರಮ ನೆರವೇರಿತು.


ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಬೆಂಗಳೂರು ಸೆಂಟ್ರಲ್ ಇನ್ಸ್‌ಟ್ಟೂಟ್ ಆಫ್ ಮೆಡಿಷನಲ್ ಮತ್ತು ಆರೋಮೆಟಿಕ್ ಪ್ಲಾಂಟ್ಸ್‌ನ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ದಿನೇಶ್ ನಾಗೇಗೌಡ, ಔಷಧೀಯ ಸಸ್ಯಗಳ ಸಂರಕ್ಷಕರಾದ ದಿನೇಶ್ ನಾಯಕ್ ವಿಟ್ಲ, ಖ್ಯಾತ ಉರಗ ತಜ್ಞ ಡಾ. ರವೀಂದ್ರನಾಥ ಐತಾಳ್, ರೇಡಿಯೋ ಪಾಂಚಜನ್ಯ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ, ವಿವೇಕ ಸಂಜೀವಿನಿ ಕಾರ್ಯಕ್ರಮ ಸಂಯೋಜಕಿ ರೂಪಲೇಖಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here