





ಕುಂತೂರು: ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ 2023-24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘ ಮತ್ತು ವಿವಿಧ ವಿಷಯ ಸಂಘಗಳ ಉದ್ಘಾಟನೆಯನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕೋಡಿಂಬಾಳ ಚರ್ಚಿನ ವಿಕಾರ್ ಫಾ| ರಿನೋ ಜೋನ್ ಇರುವತ್ತಂಜಿಲ್ ದೀಪ ಬೆಳಗಿಸಿ ಪ್ರಸಕ್ತ ವರ್ಷದ ವಿದ್ಯಾರ್ಥಿ ಸಂಘ ಮತ್ತು ವಿಷಯ ಸಂಘಗಳನ್ನು ಉದ್ಘಾಟಿಸಿದರು. ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಂಡು ಬರಲಿರುವ ಮಹತ್ತರ ಬದಲಾವಣೆಗಳ ಕುರಿತು ಅವಲೋಕನ ಮಾಡುತ್ತಾ, ಉತ್ತಮ ನಾಯಕರಾಗಲು ವಿದ್ಯಾರ್ಥಿ ಶಿಕ್ಷಕರಿಗೆ ಕರೆ ನೀಡಿದರು. ಕಾಲೇಜಿನ ಸಂಚಾಲಕ ಫಾ|ಡಾ| ಎಲ್ದೋ ಪುತ್ತೆನ್‌ಕಂಡತ್ತಿಲ್ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೊಧಿಸಿ, ಜವಾಬ್ದಾರಿ ಮತ್ತು ಕರ್ತವ್ಯ ಪಾಲನೆಗಳ ಕುರಿತಂತೆ ಹಿತವಚನ ನುಡಿದರು.





ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಉಷಾ ಎಂ ಎಲ್, ಪ್ರಸ್ತಾವನೆ ಮತ್ತು ಸ್ವಾಗತ ನೆರವೇರಿಸಿದರು. ವಿದ್ಯಾರ್ಥಿ ಸಂಘದ ಸಂಯೋಜಕರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕ ರಘುನಂದನ ಕೆ ಮತ್ತು ಚಂದ್ರಶೇಖರ ಜಿ ಎನ್ ರವರು ಜೊತೆಗೂಡಿ ಬರೆದ “ಆರೊಗ್ಯ ಮತ್ತು ದೈಹಿಕ ಶಿಕ್ಷಣ” ಎಂಬ ಮಂಗಳೂರು ವಿಶ್ವವಿದ್ಯಾನಿಲಯದ ತೃತೀಯ ಸೆಮೆಸ್ಟರ್‌ನ ಬಿ. ಇಡಿ ಪಠ್ಯಕ್ರಮದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಅಧ್ಯಕ್ಷ: ರಶ್ಮಿ ಪಿ ಕೆ (ದ್ವಿತೀಯ ಬಿ.ಎಡ್.) ಉಪಾಧ್ಯಕ್ಷ: ದೀಕ್ಷಾ ಮ್ಯಾಥ್ಯು (ಪ್ರಥಮ ಬಿ.ಎಡ್.) ಕಾರ್ಯದರ್ಶಿ: ಶ ವೀಕ್ಷಿತಾ (ದ್ವಿತೀಯ ಬಿ.ಎಡ್.) ಜತೆ ಕಾರ್ಯದರ್ಶಿ: ಫಾತಿಮತ್ ತಸ್ಪಿಯತ್ (ದ್ವಿತೀಯ ಬಿ.ಎಡ್.) ಸಾಂಸ್ಕೃತಿಕ ಕಾರ್ಯದರ್ಶಿ: ಜಯಶ್ರೀ ಎಂ (ದ್ವಿತೀಯ ಬಿ.ಎಡ್.) ಉಪ ಸಾಂಸ್ಕೃತಿಕ ಕಾರ್ಯದರ್ಶಿ: ಕೀರ್ತೀ (ಪ್ರಥಮ ಬಿ.ಎಡ್.) ಕ್ರೀಡಾ ಕಾರ್ಯದರ್ಶಿ: ಸುಗುಣ ಬಿ ಎಂ (ದ್ವಿತೀಯ ಬಿ.ಎಡ್.) ಉಪ ಕ್ರೀಡಾ ಕಾರ್ಯದರ್ಶಿ: ಶ್ರೀವೀಣ ಕೆ (ಪ್ರಥಮ ಬಿ.ಎಡ್.) ಸಾಹಿತ್ಯ ಕಾರ್ಯದರ್ಶಿ: ಶ್ವೇತ ಪಿ ಕೆ (ದ್ವಿತೀಯ ಬಿ.ಎಡ್.)ಉಪ ಸಾಹಿತ್ಯ ಕಾರ್ಯದರ್ಶಿ: ಪ್ರಿಯಾ ಎಂ (ಪ್ರಥಮ ಬಿ.ಎಡ್.) ಆಯ್ಕೆಯಾಗಿದ್ದಾರೆ.









